Ad Widget

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಚಾರಿ ಆರೋಗ್ಯ ಘಟಕದ ಲೋಕಾರ್ಪಣೆ.

ಸುಳ್ಯ ,ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಚಾರಿ ಆರೋಗ್ಯ ಘಟಕದ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ತಾಲೂಕು ಪಂಚಾಯತ್ ಮುಂಬಾಗದಲ್ಲಿ ನಡೆಯಿತು. ಸಂಚಾರೀ ಅರೋಗ್ಯ ಘಟಕ ವಾಹನದ ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು,ಭಾಗೀರತಿ ಮುರುಳ್ಯ ಉದ್ಘಾಟಿಸಿ ಶುಭಹಾರೈಸಿದರು. ಆರೋಗ್ಯ ಘಟಕದ ಲ್ಯಾಬ್ ವಿಭಾಗವನ್ನು ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಶ್ರೀ ಜಾನಿ.ಕೆ.ಪಿ ಉದ್ಘಾಟಿಸಿದರು .ಈ ವಾಹನವು ಸುಳ್ಯ,ಪುತ್ತೂರು,ಕಡಬ,ತಾಲೂಕು ಕೇಂದ್ರಗಳಲ್ಲಿ ಸಂಚರಿಸಲಿದ್ದು ಈ ಹೈಟೆಕ್ ಆರೋಗ್ಯ ಘಟಕವು ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಭಿತರಿಗೆ ಸೇವೆಯನ್ನು ನೀಡಲಿದೆ ಈ ಯೋಜನೆಯ ರಾಜ್ಯ ಮಟ್ಟದ ಉಧ್ಘಾಟನೆಯು ಸನ್ಮಾನ್ಯ ಮುಖ್ಯಂಮತ್ರಿ ಸಿದ್ದರಾಮಯ್ಯ ಅವರ ದಿವ್ಯ ಹಸ್ತದಿಂದ ಇತ್ತೀಚೆಗೆ ವಿಧಾನ ಸೌಧ ಆವರಣದಲ್ಲಿ ಉದ್ಘಾಟನೆಗೊಂಡಿದ್ದು ಸನ್ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರ ಕನಸಿನ ಯೋಜನೆ ಇದು ಎಂದು ಶ್ರೀ ಜಾನಿಯವರು ತಿಳಿಸಿದರು, ಬಡ ಕಾರ್ಮಿಕರಿಗೆ ಹಣವಿಲ್ಲದೆ ಸಕಾಲಕ್ಕೆ ಮಾಡಬೇಕಾದ ಪರೀಕ್ಷೆಗಳು ಮತ್ತು ಚಕಿತ್ಸೆಗಳು ಮಾಡಲಾಗದೆ ಕೈಮೀರುವ ಹಂತ ತಲುಪಿರುವ ಸನ್ನಿವೇಶಗಳು ಈ ಹಿಂದೆ ಇತ್ತು ಆದರೆ ಇನ್ನು ಮುಂದೆ ಹಾಗಾಗಲು ಸಾದ್ಯವಿಲ್ಲ,ಈ ವಾಹನವು ಅತ್ಯಗತ್ಯವಾದ ಅತ್ಯಾಧುನಿಕ ಹೈಟೆಕ್ ವೈಧ್ಯಕೀಯ ಪರೀಕ್ಷೆಗಳನ್ನು ನಡೆಸಿ ಫಲಾನುಭವಿಯ ವಾಟ್ಸಾಪಿಗೆ ನಿಖರ ರಿಪೋರ್ಟ್ ನೀಡುವ ವ್ಯವಸ್ಥೆಯನ್ನು ಹೊಂದಿದ್ದು ಅತ್ಯಗತ್ಯ ಔಷಧಿಗಳನ್ನು ಹೊಂದಿರುವ ಸಂಚಾರಿ ಆರೋಗ್ಯ ಕ್ಲೀನಿಕ್ ಇದಾಗಿರುತ್ತದೆ. ಎಂಬಿಬಿಎಸ್ ಪದವೀಧರ ವೈಧ್ಯರು ,ಲ್ಯಾಬ್ ಟೆಕ್ನಿಷಿಯನ್,ಎಎನ್ಎಂ,ಜಿಎನ್ಎಂನರ್ಸಸ್, ಹಾಗೂ ಓರ್ವ ಡ್ರೈವರ್ ಈ ವಾಹನದಲ್ಲಿ ಇರಲಿದ್ದಾರೆ. ಹಾಗೂ ಯಾವುದೇ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆಗೆ ಸಹಾಯ ಮಾಡಲಾಗುತ್ತದೆ. ಕಾರ್ಮಿಕರನ್ನು ಆಯುಷ್ಮಾನ್ ಯೋಜನೆಗೆ ಒಳಪಡಿಸಿ ಕಾರ್ಡ್ ನೀಡುವ ಕ್ರಮವನ್ನೂ ಕೈಗೊಳ್ಳಲಾಗುವುದು. ಎಲ್ಲಾ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಭಿತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಜಾನಿ.ಕೆ.ಪಿ ತಿಳಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶ್ರೀಮತಿ ವಿಲ್ಮಾ ,ಹಿರಿಯ ಕಾರ್ಮಿಕ ವೃತ್ತ ನಿರೀಕ್ಷಕರಾದ ಶ್ರೀ ಗಣಪತಿ ಹೆಗ್ಡೆ,ಎಕ್ಸಿಕ್ಯುಟಿವ್ ರಮೇಶ್ ,ನ ಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಸೂಡಾ ಅಧ್ಯಕ್ಷ ಮುಸ್ತಫಾ ಕೆ.ಎಂ ,ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಹಶೀಲ್ದಾರ್ ಮಂಜುಳಾ ಎಂ ತಾಲೂಕು ಪಂಚಾಯತ್ ಕಾರ್ನಿರ್ವಹಣಾಧಿಕಾರಿ ರಾಜಣ್ಣ , ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ,ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ,ಅಶ್ರಫ್ ಗುಂಡಿ,ತೀರ್ಥರಾಮ ಜಾಲ್ಸೂರು,ಪರಮೇಶ್ವರ ಕೆಂಬಾರೆ,ಕೃಷಿ ನಿರ್ದೇಶಕ ಗುರುಪ್ರಸಾದ್ , ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು, ಚೇತನ್ ಕಚೆಗದ್ದೆ ,ಮಹೇಶ್ ಬೆಳ್ಳಾರ್ಕರ್,ಭವಾನಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading