

ಶ್ರೀ ಭಾರತೀ ಸೇವಾ ಸಮಿತಿ ( ರಿ.)ಕಳಂಜ ಇದರ ವತಿಯಿಂದ ನಡೆಸಲ್ಪಡುವ ಶ್ರೀ ವಿದ್ಯಾನಿಕೇತನ ಶಿಶುಮಂದಿರದ ಪ್ರಾರಂಭೋತ್ಸವವು ಜೂ.11ರಂದು ನಡೆಯಿತು. ಈ ಸಂದರ್ಭದಲ್ಲಿ ಆರತಿ ಬೆಳಗುವ ಮೂಲಕ ಶಿಶುಮಂದಿರದ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಭಾಗದ ಸಹಕಾರ್ಯವಾಹಕರಾದ ಸುಭಾಶ್ಚಂದ್ರ ಕಳಂಜ ಶುಭಹಾರೈಸಿದರು. ಅಧ್ಯಕ್ಷರಾದ ರವಿಪ್ರಸಾದ್ ರೈ ಕಳಂಜ ಸ್ವಾಗತಿಸಿದರು. ಕಾರ್ಯದರ್ಶಿ ಅಜೇಯ್ ಆದಾಳ ವಂದಿಸಿದರು. ಈ ಸಂದರ್ಭದಲ್ಲಿ ಮಾತಾಜಿ ಅಕ್ಷತಾ ಕಳಂಜ ಮತ್ತು ಸಹಾಯಕಿ ಪುಷ್ಪಲತಾ ಕುಕ್ಕುತ್ತಡಿ ಉಪಸ್ಥಿತರಿದ್ದರು. ಇದೇ ವೇಳೆ ಮಧ್ಯಾಹ್ನದ ಊಟದ ವ್ಯವಸ್ಥೆ ಪ್ರಾರಂಭಿಸಲಾಯಿತು. ಪೂರ್ತಿದಿನ ಶಿಶುಮಂದಿರ ನಡೆಯಲಿದೆ ಎಂದು ಶಿಶುಮಂದಿರದ ಅಧ್ಯಕ್ಷರು ತಿಳಿಸಿದ್ದಾರೆ.