Ad Widget

ಸುಬ್ರಹ್ಮಣ್ಯ : ಸೀನಿಯರ್ ಚೇಂಬರ್ ಹಾಗೂ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಪರಿಸರ ಸ್ವಚ್ಛತಾ ಅಭಿಯಾನ

. . . . . . . . .

. . . . . . .

ಸುಬ್ರಹ್ಮಣ್ಯ ಜೂನ್ 8 : ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾl ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ರವಿವಾರ ಕುಮಾರಧಾರ ಪರಿಸರ ಹಾಗೂ ಕುಲ್ಕುಂದದವರೆಗಿನ ರಸ್ತೆ ಬದಿಗಳಲ್ಲಿ ಶೇಖರಣೆಗೊಂಡಿದ್ದ ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲುಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಎಲ್ಲೆಂದರಲ್ಲಿ ಬಿಸಾಡಿದ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಚೀಲಗಳಲ್ಲಿ ತುಂಬಿ ಅದನ್ನ ಇಂಜಾಡಿಯಲಿರುವ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಕೊಂಡೊಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ವೈನಾಡ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪೂರ್ವಾಧ್ಯಕ್ಷ ಹಾಗೂ ರಾಷ್ಟ್ರೀಯ ನಿರ್ದೇಶಕರಾದ ಸೀನಿಯರ್ ವಿಜಯಕುಮಾರ್ ಅವರು “ಸುಬ್ರಹ್ಮಣ್ಯದಂತ ಕ್ಷೇತ್ರದಲ್ಲಿ ಇಂತಹ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರತಿ ರವಿವಾರ ಡಾlರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನೊಂದಿಗೆ ಸೀನಿಯರ್ ಚೇಂಬರ್ ರವರು ಭಾಗವಹಿಸಿ ಸೇವಾ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸ್ತಕ್ಕಂತ ಕ್ಷೇತ್ರ ಇದಾಗಿದೆ, ಭಕ್ತಾದಿಗಳಿಗೆ ಎಷ್ಟೇ ಮಾಹಿತಿಯನ್ನು ನೀಡಿದರೂ ಎಲ್ಲೆಂದರಲ್ಲಿ ಬಿಸಾಡಿದ ಕಸ ಕಡ್ಡಿಗಳನ್ನು, ಪ್ಲಾಸ್ಟಿಕ್ ಚೀಲಗಳು, ಬಾಟಲುಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ನಿರಂತರವಾಗಿ ಪ್ರತಿ ರವಿವಾರ ಸ್ವಚ್ಛಗೊಳಿಸುತ್ತಿರುವುದು ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿ ಹಾಗೂ ಸಾರ್ವಜನಿಕರ ಸ್ವಸ್ಥ ಹಿತದೃಷ್ಟಿಯಿಂದಲೂ ಉತ್ತಮ ಕಾರ್ಯ. ಇಂಥ ಪುಣ್ಯಕಾರ್ಯ ಇದು ನಿರಂತರವಾಗಿ ಇಲ್ಲಿ ನಡೆಯುತ್ತಾ ಬರಲಿ ಅವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಸದಾ ಸೇವೆಯನ್ನು ಮಾಡುವಂತೆ ಕರುಣಿಸಲಿ” ಎಂದು ಶುಭವನ್ನು ಹಾರೈಸಿದರು.


ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ಡಾlರವಿ ಕಕ್ಕೆಪದವು, ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ, ನಿಯೋಜಿತ ಅಧ್ಯಕ್ಷ ಎಚ್.ಎಲ್ ವೆಂಕಟೇಶ್, ನಿಯೋಜಿತ ಕಾರ್ಯದರ್ಶಿ ಗೋಪಾಲ ಎಣ್ಣೆಮಜಲು, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರುಗಳಾದ ರವಿ ಕುಮಾರಧಾರ, ಜನಾರ್ದನ ಗೌಡ ಹಾಗೂ ಇನ್ನಿತರ ಸದಸ್ಯರುಗಳು ಹಾಜರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading