Ad Widget

ಸುಬ್ರಹ್ಮಣ್ಯದಲ್ಲಿ ಸುವರ್ಣ ವಿವಾಹ ಸಂಭ್ರಮದಲ್ಲಿ ಸಾಧಕರಿಗೆ ಸನ್ಮಾನ

ಸುಬ್ರಹ್ಮಣ್ಯ ಜೂನ್ 6: ಸುಬ್ರಹ್ಮಣ್ಯದ ದೋಣಿಮಕ್ಕಿಯಲ್ಲಿ ಇತ್ತೀಚೆಗೆ ನಡೆದ ಎಣ್ಣೆಮಜಲ್ ಪಟೇಲ್ ಪುಟ್ಟಣ್ಣ ಗೌಡ ವಿಶಾಲಾಕ್ಷಿ ದಂಪತಿಯ ವಿವಾಹ ಸುವರ್ಣ ಸಂಭ್ರಮದಲ್ಲಿ ಕಾಯಕರತ್ನ ಪ್ರಶಸ್ತಿ ಪಡೆದ ಡಾ. ರವಿ ಕಕ್ಕೆಪದವು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಭರತ್ ನೆಕ್ರಾಜೆ ಅವರುಗಳನ್ನ ಸುವರ್ಣ ವೇದಿಕೆಯಲ್ಲಿ ಗೌರವಿಸಲಾಯಿತು. ಪಟೇಲ್ ಪುಟ್ಟಣ್ಣಗೌಡರು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ರೋಟರಿ ಪೂರ್ವ ಅಸಿಸ್ಟೆಂಟ್ ಗವರ್ನರ್ ಗಳಾದ ಡಾl ಕೇಶವ ಹಾಗೂ ಜಿತೇಂದ್ರ, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರುಗಳು, ಸದಸ್ಯರುಗಳು ಹಾಜರಿದ್ದರು.
ಸಮಾರಂಭ ಆಯೋಜಕರುಗಳಾದ ಗೋಪಾಲ್ ಎಣ್ಣೆಮಜಲ್ ಹಾಗೂ ನಿರ್ದೇಶಕ ದಿನೇಶ್ ಎಣ್ಣೆಮಜಲ್ ವೇದಿಕೆಯಲ್ಲಿದ್ದರು.
ಉಪನ್ಯಾಸಕರುಗಳಾದ ಸೌಮ್ಯ ದಿನೇಶ್ ಹಾಗೂ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading