Ad Widget

ಕಾನೂನು ವ್ಯವಸ್ಥೆ ವಿಫಲವಾಗಿರುವುದನ್ನು ಮರೆಮಾಚಲು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ – ಕ್ಯಾ| ಬ್ರಿಜೇಶ್ ಚೌಟ

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ದಿಕ್ಕು ತಪ್ಪಿದ್ದು, ಈ ಹೊಣೆಗೇಡಿ ಸರಕಾರ ಆಡಳಿತ ವೈಫಲ್ಯ ಮರೆಮಾಚಲು ಜನರನ್ನು ಹಲವು ಮುಖಗಳಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದ.ಕ.ಜಿಲ್ಲೆಯವರು ಕೋಮುವಾದಿಗಳು ಎಂದು ತುಚ್ಛವಾಗಿ ನೋಡುವ ಕೆಲಸ ಕಾಂಗ್ರೆಸ್ ನಿಂದ ಆಗುತ್ತಿದೆ. ದ.ಕ.ಜಿಲ್ಲೆಯ ಶಾಸಕರ ಕ್ಷೇತ್ರಗಳ ಅಭಿವೃದ್ದಿಗೆ ಹಾಗೂ ಪ್ರಕೃತಿ ವಿಕೋಪಕ್ಕೆ ಬಿಡಿಗಾಸು  ನೀಡಿಲ್ಲ.

. . . . . . . . .

ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ದಾಳಿ ಆಗುತ್ತಿದ್ದು, ದೇಶದಲ್ಲಿ ನಿಷೇಧಿತ ಪಿಎಫ್ ಐ ಕಾರ್ಯಕರ್ತರು ಎಸ್.ಡಿ.ಪಿ.ಐ ಜೊತೆ ಸೇರಿಕೊಂಡು ತನ್ನ ಚಟುವಟಿಕೆಗಳನ್ನು ಮುಕ್ತವಾಗಿ ಮಾಡುತ್ತಿದೆ.

. . . . . . .

ಗೃಹಸಚಿವರು ತನ್ನ ವೈಫಲ್ಯವನ್ನು ಪೋಲೀಸರ ತಲೆಗೆ ಕಟ್ಟಿ ಅಧಿಕಾರಿಗಳ ಬದಲಾವಣೆ ಮಾಡಿಸಿದೆ. ಇವರನ್ನು ಉಪಯೋಗಿಸಿಕೊಂಡು ಸಂವಿಧಾನ ಬಾಹಿರವಾಗಿ ರಾತ್ರೋರಾತ್ರಿ ಇದುವರೆಗೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗದ ಹಿಂದೂ ಕಾರ್ಯಕರ್ತರ ಮನೆಗಳಿಗೂ ದಾಳಿ ಮಾಡಿ ಪೋಟೋ  ತೆಗೆಯುತ್ತಿದ್ದಾರೆ.  ಪೋಲೀಸ್ ಇಲಾಖೆಯ ಕ್ರಮ ತುರ್ತು ಪರಿಸ್ಥಿತಿಯ ಸಂದರ್ಭದವನ್ನು ನೆನಪಿಸುತ್ತಿದೆ. ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ಪೋಲೀಸರು ಸಂಪೂರ್ಣ ವಿಫಲವಾದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೂಂಡಗಳು,ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ಅಕ್ರಮ ಮರಳು ದಂಧೆ, ಡ್ರಗ್ಸ್, ಬೆಟ್ಟಿಂಗ್, ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹಿಂದೂ ಕಾರ್ಯಕರ್ತ ಸತ್ತರೇ ರೌಡಿ ಶೀಟರ್ ಹಣೆಪಟ್ಟಿ ಕಟ್ಟುತ್ತಿದ್ದಾರೆ.‌ ನಿಮ್ಮ ಸರಕಾರದ ವೈಫಲ್ಯ ಮುಚ್ಚಿಹಾಕಲು ಹಿಂದೂ ಕಾರ್ಯಕರ್ತರನ್ನು ಕೆಣಕಿದರೇ ಬಿಜೆಪಿ ಸುಮ್ಮನೆ ಇರುವುದಿಲ್ಲ, ಇದರ ವಿರುದ್ಧ ಜನಜಾಗೃತಿ ಮಾಡಿ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ.

ಆರ್ ಸಿ.ಬಿ. ವಿಜಯೋತ್ಸವದಲ್ಲಿ ರಾಜ್ಯ ಸರಕಾರ ಮೂಗು ತೂರಿಸಲು ಹೋಗಿದ್ದರಿಂದ  ಕಾಲ್ತುಳಿತ ನಡೆದು ಮುಗ್ಧ ಜನರ ಪ್ರಾಣ ಹೋಗಿದೆ. ಈ ತಪ್ಪನ್ನು ಪೋಲೀಸ್ ಅಧಿಕಾರಿಗಳ ತಲೆಗೆ ಕಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸಲು ವಿಫಲವಾಗಿರುವುದರಿಂದ ಗೃಹಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು.‌ ಸಂವಿಧಾನದ ಬಾಹಿರವಾಗಿ ಪೋಲೀಸರನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ. ಇಸ್ಲಾಂ ಮೂಲಭೂತವಾದಿಗಳಿಗೆ ಹಾಗೂ ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ಪೋಲಿಸ್ ಇಲಾಖೆಯ ಮುಖಾಂತರ ಪೋಷಣೆ ಮಾಡುವ ವರ್ತನೆಯನ್ನು ಕಾಂಗ್ರೆಸ್ ಸರಕಾರ ಬದಲಿಸಿಕೊಳ್ಳಬೇಕು. ಇಲ್ಲದೇ ಹೋದರೆ ಬಿಜೆಪಿ  ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading