Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಛಾಯಾ ಮಾನಸ ಗಿಡ ವಿತರಣೆ

ಸುಬ್ರಹ್ಮಣ್ಯ ಮೇ 30 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಛಾಯಾ ಮಾನಸ ಗಿಡಗಳನ್ನು ವಿತರಣೆ ಮಾಡಲಾಯಿತು. ಛಾಯಾ ಮಾನಸ ಪ್ಲಾಂಟ ಗಳನ್ನು ಮಾಡುವುದರಿಂದ ಇದರ ಪ್ರಾಮುಖ್ಯತೆ ಏನೆಂದರೆ ಇದರಲ್ಲಿ ಮ್ಯಾಗ್ನಿಷಿಯಮ್, ಕ್ಯಾಲ್ಸಿಯಂ ಹಾಗೂ ಕಬ್ಬಿನಾಂಶಗಳಿರುತ್ತವೆ. ಇದು ಡಯಾಬಿಟಿಸ್ ರೋಗಿಗಳಿಗೆ ಅತ್ಯುತ್ತಮವಾದ ಔಷಧ. ಅಲ್ಲದೆ ಇದರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುವ ಅಂಶ ಇದೆ. ಇದನ್ನು ಹೆಚ್ಚಾಗಿ ಪ್ರಾಣಿಗಳಲ್ಲಿ ಮೇಕೆ, ಕುರಿ ಇನ್ನತರ ಇನ್ನಿತರ ಪ್ರಾಣಿಗಳಿಗೆ ಇದರ ಸೊಪ್ಪನ್ನ ತಿನ್ನಲು ಕೊಡುತ್ತಾರೆ. ಮನುಷ್ಯರು ಇದರ ಸೊಪ್ಪನ್ನ ಜ್ಯೂಸ್ ಮಾಡಿ ಕುಡಿಯಬಹುದು ಅಥವಾ ಪಲ್ಯ ಮಾಡಿ ತಿನ್ನಬಹುದು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ಗಿಡಗಳನ್ನು ಎಲ್ಲಾ ಸದಸ್ಯರುಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಪೂರ್ವಾಧ್ಯಕ್ಷರುಗಳಾದ ಕಿಶೋರ್ ಕುಮಾರ್ ಕೂಜುಗೋಡು ,ಗೋಪಾಲ ಎಣ್ಣೆ ಮಜಲ್, ಲೋಕೇಶ್ ಬಿ.ಎನ್, ಡಾl ರವಿ ಕಕ್ಕೆ ಪದವು, ವೆಂಕಟೇಶ.ಎಚ್.ಎಲ್, ಭರತ್ ನೇಕ್ರಾಜೆ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಸದಸ್ಯ ದಿನೇಶ್ ಎಣ್ಣೆಮಜಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading