Ad Widget

ಸರ್ವ ಕ್ರೈಸ್ತ ಸಮುದಾಯ ಸಂಘದ ವತಿಯಿಂದ ನಿವೃತ್ತ ಶಿಕ್ಷಕಿಗೆ ಹಾಗೂ ಉನ್ನತ ಧರ್ಜೆಯಲ್ಲಿ ಉತ್ತೀರ್ಣರಾದ ಕ್ರೈಸ್ತ ಸಮುದಾಯದ ವಿಧ್ಯಾರ್ಥಿಗಳಿಗೆ ಸಂಪಾಜೆಯಲ್ಲಿ ಸನ್ಮಾನ ಕಾರ್ಯಕ್ರಮ

ಮೇ.25 ರಂದು ಸಂಪಾಜೆಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಮತ್ತು ಸಂಪಾಜೆ ವಲಯಕ್ಕೊಳಪಡುವ ಸರ್ವ ಕ್ರೈಸ್ತ ಸಮುದಾಯದ ವಿಧ್ಯಾರ್ಥಿಗಳಾಗಿದ್ದು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಮತ್ತು ನಿವೃತ್ತ ಶಿಕ್ಷಕಿಗೆ ಸನ್ಮಾನಿಸುವ ಕಾರ್ಯಕ್ರಮ ಏರ್ಪಡಿಸಲಾಯಿತು . ಈ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣವನ್ನು ಮಾಡಿದ ಸಂತ ಪ್ರಾನ್ಸಿಸ್ ಕ್ಸೇವಿಯರ್...

ಕಲ್ಲುಗುಂಡಿ : ವಿದ್ಯುತ್ ಶಾಕ್ – ಲೈನ್ ಮ್ಯಾನ್ ಗೆ ಗಂಭೀರ ಗಾಯ

ಕಲ್ಲುಗುಂಡಿ  ಕಡಪಾಲದ ಸಮೀಪ  ಕರೆಂಟ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭದಲ್ಲಿ ಲೈನ್ ಮ್ಯಾನ್ ನವೀನ್ ಎಂಬವರಿಗೆ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಘಟನೆ ಮೇ.26 ರಂದು ಮಧ್ಯಾಹ್ನ ನಡೆದಿದೆ. ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ನವೀನ್ ಅವರನ್ನು ಸ್ಥಳೀಯರು  ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Ad Widget

ಅರಂತೋಡು : ಪ್ರಾಥಮಿಕ ಶಾಲಾ ಬಳಿ ರಸ್ತೆಗೆ ಬಾಗಿರುವ ಅಪಾಯಕಾರಿ ಮರ ತೆರವುಗೊಳಿಸಲು ಒತ್ತಾಯ

ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ  ಬಳಿ ರಸ್ತೆಗೆ ಬಾಗಿ ಮರವೊಂದು ನಿಂತಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸುವ  ರಸ್ತೆಯಲ್ಲಿರುವ ಮರವನ್ನು ಅಪಾಯ ಸಂಭವಿಸುವ ಮೊದಲು ತೆರವುಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ.

ಮರುಪರೀಕ್ಷೆ ಬರೆದ ಗುತ್ತಿಗಾರು ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿ ಯಶಸ್ವಿ ಎರ್ದಡ್ಕಳಿಗೆ 21 ಹೆಚ್ಚುವರಿ ಅಂಕ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಯಶಸ್ವಿ ಎರ್ದಡ್ಕ ಇವರು ಫಲಿತಾಂಶ ಉತ್ತಮಪಡಿಸುವ ಸಲುವಾಗಿ ಮರು ಪರೀಕ್ಷೆ ಬರೆದಿದ್ದು 21 ಅಂಕ ಹೆಚ್ಚುವರಿ ಪಡೆದುಕೊಂಡಿರುತ್ತಾರೆ. ಮರು ಪರೀಕ್ಷೆಯಲ್ಲಿ 522 ಡಿಸ್ಟಿಂಕ್ಷನ್ ಅಂಕ ಪಡೆದದಿರುತ್ತಾರೆ. ಇವರು ಮಾಧವ ಎರ್ದಡ್ಕ ಹಾಗೂ ರೂಪ ಎರ್ದಡ್ಕ ರವರ...

ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಜಲಪಾತಗಳ ಬಳಿ ಹುಚ್ಚಾಟ ಮಾಡದಿರಿ… ಒಂದು ಕ್ಷಣದ ಖುಷಿಗಾಗಿ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರಿ…

ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಇನ್ನೇನು ಕೆಲವೇ ದಿನಗಳಲ್ಲಿ ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯಲು ಪ್ರಾರಂಭಿಸುತ್ತವೆ.ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಜೀವಸಂಕುಲದ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುತ್ತಿರುವ ಈ ಮಳೆಯಲ್ಲಿ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು...

ಗೂನಡ್ಕ ಮರ ಬಿದ್ದು ಮನೆಗಳಿಗೆ ಹಾನಿ – ನೆರವಿಗೆ ಧಾವಿಸಿದ ಸಂಘ ಸಂಸ್ಥೆಗಳು – ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಭೇಟಿ

ಸಂಪಾಜೆ ಗ್ರಾಮದ ಗೂನಡ್ಕ ಉಮ್ಮರ್ ಹಾಜಿ ಯವರ ಬಾಡಿಗೆ ಮನೆ ಮೇಲೆ ಸಾಗುವಾನಿ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಅದರಲ್ಲಿ ವಾಸವಿದ್ದ 3 ಕುಟುಂಬ ಅಪಾಯದಿಂದ ಪಾರಾಗಿದ್ದಾರೆ.ಮನೆಯಲ್ಲಿ ವಾಸವಿದ್ದ 2 ಮಕ್ಕಳು ಹಾಗೂ ತಾಯಿಯ ಮೇಲೆ ಸೀಟು ಬಿದ್ದು ಸಣ್ಣ ಪುಟ್ಟ ಹಾನಿಯಾಗಿದ್ದು ಸುಳ್ಯದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಅಲ್ಲದೆ 3 ಮನೆಗಳಲ್ಲಿ...

ಬಾಳಿಲ : ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಕಂಬ – ಪೈಪ್ ಲೈನ್ ಕಾಮಗಾರಿಯಿಂದ ಹಲವು ಸಮಸ್ಯೆ

ಬೆಳ್ಳಾರೆ ಗುತ್ತಿಗಾರು 33ಕೆ.ವಿ. ವಿದ್ಯುತ್ ಲೈನ್ ನ ಕಂಬವೊಂದು ಬಾಳಿಲ ಸಮೀಪ ಅಪಾಯಕಾರಿ ಸ್ಥಿತಿಯಲ್ಲಿದ್ದು ರಸ್ತೆಗೆ ಬೀಳುವ ಹಂತದಲ್ಲಿದೆ. ವಿದ್ಯುತ್ ಕಂಬದ ಬಳಿಯೇ ಪೈಪ್ ಲೈನ್ ಕಾಮಗಾರಿ ನಡೆಸಿದ್ದರಿಂದ ಕಂಬ ಬೀಳುವಂತಾಗಿದೆ. ಮಳೆಗಾಲ ಆರಂಭವಾದರೂ ಇನ್ನೂ ಎಲ್ಲಾ ಕಡೆ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಜನತೆ ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.‌ ಮಳೆಗಾಲ ಕಾಮಗಾರಿ...

ಜನ ಔಷಧಿ ಕೇಂದ್ರ ಮುಚ್ಚುಗಡೆಯ ಮೂಲಕ ರಾಜ್ಯ ಸರ್ಕಾರ ಬಡಜನ ವಿರೋಧಿ ಧೋರಣೆ ಸ್ಪಷ್ಟವಾಗಿದೆ – ವೆಂಕಟ್ ವಳಲಂಬೆ

ಬಡವರಿಗೆ ಮತ್ತು ಜನಸಾಮಾನ್ಯರಿಗೆ ಗುಣಮಟ್ಟದ ಔಷಧಿ,ಕಡಿಮೆ ದರದಲ್ಲಿ ದೊರೆಯುವಂತೆ ಕೇಂದ್ರ ಸರ್ಕಾರ ತಂದಿದ್ದ ಜನ ಔಷಧಿ ಕೇಂದ್ರವನ್ನು ರಾಜ್ಯ ಸರ್ಕಾರ ಸಕಾರಣವಿಲ್ಲದೆ  ಬಂದ್ ಮಾಡಲು ಆದೇಶ ಮಾಡಿರುವುದನ್ನು ಬಿಜೆಪಿ ಮಂಡಲ ಅಧ್ಯಕ್ಷ  ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಜನಸಾಮಾನ್ಯರಿಗೆ ಈ ಕೇಂದ್ರಗಳಿಂದ ಆರೋಗ್ಯ ವ್ಯವಸ್ಥೆ ಅಗ್ಗವಾಗಿ ದೊರೆಯಬೇಕೆಂದು ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ...

ನಾಳೆ (ಮೇ 25) ಬಿಳಿನೆಲೆ ಕೈಕಂಬ ಯುವಕ ಮಂಡಲದ ಸುವರ್ಣ ಮಹೋತ್ಸವ

ಸುಬ್ರಹ್ಮಣ್ಯ ಮೇ 24: ಬಿಳಿನೆಲೆ ಕೈಕಂಬ ಯುವಕ ಮಂಡಲದ ನೂತನ ಕಟ್ಟಡ ಯುವಸೌಧದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭವು ಮೇ 25 ರವಿವಾರದಂದು ಜರಗಲಿರುವುದು. ಬೆಳಿಗ್ಗೆ ನೂತನ ಕಟ್ಟಡದ ಉದ್ಘಾಟನೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಲೀಲಾವತಿ ದೇವರಾಜ್ ಮುದ್ದಾಜೆ ವೆಂಕಟಪುರ ಇವರು ನೆರವೇರಿಸಲಿರುವರು. ಸಂಜೆ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು ತದನಂತರ ಪುಟಾಣಿ...

ಮರ್ಕಂಜ ಪ್ರಶಾಂತ್ ಕೆ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಬಹುಮಾನ

ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ ಕೃತಿಯು ಆಯ್ಕೆಯಾಗಿದ್ದು. 52ನೇ ವಾರ್ಷಿಕ ಬಹುಮಾನಕ್ಕೆ ಸುಳ್ಯ ತಾಲೂಕಿನ ಮರ್ಕಂಜ ಪ್ರಶಾಂತ್ ಕೆ ಅವರು ಭಾಜನರಾಗಿದ್ದಾರೆ. ಇವರು ಉಮೇಶ್ ಹಾಗೂ ಕಾವೇರಿ ದಂಪತಿಗಳ ದ್ವಿತೀಯ ಪುತ್ರ . ಇವರು ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ visual art ಎನ್ನುವ ವಿಚಾರದಲ್ಲಿ ಸ್ನಾತಕೋತ್ತರ ಮುಗಿಸಿರುತ್ತಾರೆ....
Loading posts...

All posts loaded

No more posts

error: Content is protected !!