
ಸಂಪಾಜೆ ಗ್ರಾಮದ ಗೂನಡ್ಕ ಉಮ್ಮರ್ ಹಾಜಿ ಯವರ ಬಾಡಿಗೆ ಮನೆ ಮೇಲೆ ಸಾಗುವಾನಿ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಅದರಲ್ಲಿ ವಾಸವಿದ್ದ 3 ಕುಟುಂಬ ಅಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿ ವಾಸವಿದ್ದ 2 ಮಕ್ಕಳು ಹಾಗೂ ತಾಯಿಯ ಮೇಲೆ ಸೀಟು ಬಿದ್ದು ಸಣ್ಣ ಪುಟ್ಟ ಹಾನಿಯಾಗಿದ್ದು ಸುಳ್ಯದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಅಲ್ಲದೆ 3 ಮನೆಗಳಲ್ಲಿ ವಾಸವಾಗಿದ್ದ ಕುಟುಂಬಗಳ ಬಟ್ಟೆ ಬರೆ ದಿನಸಿ ಸಾಮಗ್ರಿ ಅಗತ್ಯ ವಸ್ತುಗಳು ನಾಶವಾಗಿದೆ. ಈ ಭಾಗದಲ್ಲಿ ಸಂಭವಿಸಿದ ವ್ಯಾಪಕ ಮಳೆ ಗಾಳಿಗೆ ಗೂನಡ್ಕ ಬಳಿ ವಿದ್ಯುತ್ ಪರಿವರ್ತಕ ನೆಲಕ್ಕುರುಳಿದೆ.
ದಂಡೆಕಜೆ ಬಳಿ ವಿಧವೆ ಲಕ್ಷ್ಮೀ ಯವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕಲ್ಲುಗುಂಡಿ , ಕೀಲಾರು, ದಂಡೆಕಜೆ ಬಳಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಾನಿಯಾಗಿದ್ದು ತೆರವು ಗೊಳಿಸಲಾಯಿತು
ಪೇರಡ್ಕ ಜುಮಾ ಮಸೀದಿ ಬಳಿ ಭಾರಿ ಗಾತ್ರದ ಮಾವಿನ ಮರ ಹಾಗೂ 2 ತೆಂಗಿನ ಮರ ಬಿದ್ದು ಪ್ರವಾಸೋದ್ಯಮ ಇಲಾಖೆಯ ಹೊಸ ಕಟ್ಟಡಕ್ಕೆ ಹಾನಿಯಾಗಿದೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಪಂಚಾಯತ ಸದಸ್ಯರಾದ ಅನುಸಾಲಿ ಉಪಸ್ಥಿತಿಯಲ್ಲಿ
ಧರ್ಮಸ್ಥಳ ಸೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು . ವಿಖಾಯ, ತಂಡದ ಸದಸ್ಯರು, ಸಹಾಯ ತಂಡದ ಸದಸ್ಯರು ಸಹಕಾರ ಮಾಡುತ್ತಿದ್ದು. ಊರವರು ಅಲ್ಲಲ್ಲಿ ಮರ ತೆರವು ಕಾರ್ಯಾಚರಣೆಗೆ ನೆರವಾದರು. ಅರಣ್ಯ, ಮೆಸ್ಕಾಂ, ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಸಹಕಾರ ಮಾಡಿದ್ದು ಕಂದಾಯ ಅಧಿಕಾರಿ ಅವಿನ್ ರಂಗತ್ ಮಲೆ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್, ರಾಧಾಕೃಷ್ಣ ಬೊಳ್ಳೂರು, ಸುಡಾ ಅಧ್ಯಕ್ಷರಾದ ಮುಸ್ತಾಫ ಸುಳ್ಯ ಇಕ್ಬಾಲ್ ಎಲಿಮಲೆ, ಶಶಿಧರ್ ಮಾಸ್ಟರ್, ಭವಾನಿ ಶಂಕರ್ ಕಲ್ಮಡ್ಕ, ನಗರ ಪಂಚಾಯತ ಸದಸ್ಯರಾದ ಸಿದ್ದಿಕ್ ಕೊಕ್ಕೋ, ಮಹಮದ್ ಕುಂಞಿ ಗೂನಡ್ಕ, ಸಲೀಂ ಪೆರುಂಗೋಡಿ, ಜುಬೈರ್ ಅರಂತೋಡು ಮೊದಲಾದವರು ಭೇಟಿ ನೀಡಿದ್ದಾರೆ.
