
ಸುಬ್ರಹ್ಮಣ್ಯ ಮೇ 24: ಬಿಳಿನೆಲೆ ಕೈಕಂಬ ಯುವಕ ಮಂಡಲದ ನೂತನ ಕಟ್ಟಡ ಯುವಸೌಧದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭವು ಮೇ 25 ರವಿವಾರದಂದು ಜರಗಲಿರುವುದು. ಬೆಳಿಗ್ಗೆ ನೂತನ ಕಟ್ಟಡದ ಉದ್ಘಾಟನೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಲೀಲಾವತಿ ದೇವರಾಜ್ ಮುದ್ದಾಜೆ ವೆಂಕಟಪುರ ಇವರು ನೆರವೇರಿಸಲಿರುವರು. ಸಂಜೆ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು ತದನಂತರ ಪುಟಾಣಿ ವಿದ್ಯಾರ್ಥಿಗಳಿಗೆ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ ವೈಭವ ನಡೆಯಲಿರುವುದು ತದನಂತರ ರಾತ್ರಿ ಗಂಟೆ 10 ರಿಂದ ಕುಶಾಲ್ದ ಗುರಿಕಾರ ದಿನೇಶ್ ಕೋಡಪದವು ಅವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಹಾಸ್ಯ ವೈಭವ ನಡೆಯಲಿರುವುದಾಗಿ ಸಂಘಟಕರು ತಿಳಿಸಿರುತ್ತಾರೆ.
