Ad Widget

ಸುಳ್ಯ : ಜೇನು ಸೊಸೈಟಿಯ ನೂತನ ಕಟ್ಟಡ, ಆಧುನಿಕ ಸಂಸ್ಕರಣಾ ಘಟಕ ಹಾಗೂ ಜೇನು ಚಾಕೋಲೇಟ್ ಲೋಕಾರ್ಪಣೆ

ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕ ಹಾಗೂ ಜೇನು ಚಾಕೋಲೆಟ್ ಹನಿ ಬೈಟ್ ನ ಲೋಕಾರ್ಪಣೆ ಮೇ.23 ರಂದು ನಡೆಯಿತು.

. . . . . . . . .

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಯವರು ನೂತನ ಕಟ್ಟಡ ಹಾಗೂ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಸಹಕಾರ ರತ್ನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಜೇನು ಚಾಕಲೇಟ್ ಲೋಕಾರ್ಪಣೆಗೊಳಿಸಿದರು. ಶಾಸಕಿ ಕು.ಭಾಗೀರಥಿ ಮುರುಳ್ಯ ನಾಮಫಲಕ ಅನಾವರಣಗೊಳಿಸಿದರು. ಬಳಿಕ ಸುಳ್ಯದ ಶಾಸ್ತ್ರೀ ವೃತ್ತದಲ್ಲಿರುವ ಅಮೃತ ಭವನದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ಚಂದ್ರ ಕೋಲ್ಟಾರು ವಹಿಸಿದ್ದರು.

. . . . . . .

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೋಟ್ಟು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಾಫ, ಜೇನು ವ್ಯವಸಾಯಗಾರರ ಸಂಘದ ಉಪಾಧ್ಯಕ್ಷ ರಾಜರಾಮ ಶೆಟ್ಟಿ, ವ್ಯವಸ್ಥಾಪಕಾ ನಿರ್ದೇಶಕ ತಿಮ್ಮಯ್ಯ ಪಿ. ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading