
ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘ (Ex Servicemen Association Sullia) ದ ವತಿಯಿಂದ ಪಶು ಸಂಗೋಪನ ಇಲಾಖೆಯ ಸುಳ್ಯ ತಾಲೂಕು ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ (Electric Autoclave) ಯಂತ್ರವನ್ನು 2024 25 ನೇ ಸಾಲಿನ ಕೊಡುಗೆಯಾಗಿ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ನಿತಿನ್ ಪ್ರಭು ಕೆ ಇವರಿಗೆ ಹಸ್ತಾಂತರಿಸಿದರು. ಈ ಉಪಕರಣವನ್ನು ದಿನನಿತ್ಯ ನಡೆಯುವ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಶುದ್ಧೀಕರಣ ಮತ್ತು ನಂಜು ಮುಕ್ತಗೊಳಿಸುವುದಕ್ಕಾಗಿ ಬಳಸಲಾಗುತ್ತದೆ.
2023 24 ನೇ ಸಾಲಿನಲ್ಲಿ ಮಾಜಿ ಸೈನಿಕರ ಸಂಘವು ಪಶು ಆಸ್ಪತ್ರೆ ಸುಳ್ಯಕ್ಕೆ ಎಲೆಕ್ಟ್ರಾನಿಕ್ ಓಟೋಸ್ಕೋಪ್(Electronic Otoscope) ಅನ್ನು ಕೊಡುಗೆಯಾಗಿ ನೀಡಿತ್ತು. ಇದರಿಂದ ಬಹಳಷ್ಟು ಪ್ರಾಣಿಗಳ ಕಿವಿಯ ಚಿಕಿತ್ಸೆ ಮಾಡುವಲ್ಲಿ ಸಹಕಾರಿಯಾಗುತ್ತಿದೆ.
