
✍️ಉಲ್ಲಾಸ್ ಕಜ್ಜೋಡಿ
“ನಾವು ಮಾಡಬೇಕೆಂದಿರುವ ಪ್ರತಿಯೊಂದು ಕೆಲಸಗಳಿಗೂ ಕೂಡ ಸಮಯ-ಸಂದರ್ಭಗಳು ಕೂಡಿ ಬರಬೇಕು” ಎನ್ನುವ ಮಾತಿದೆ. ಅದೇ ರೀತಿ ಕಳೆದ ಐದು ವರ್ಷಗಳಿಂದ “ಅಮರ ಸುದ್ದಿ ವಾರಪತ್ರಿಕೆಯಲ್ಲಿ” ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ನನ್ನ “ತಂದೆ-ತಾಯಿ” ಹಾಗೂ “ಅಮರ ಸುದ್ದಿ ಪತ್ರಿಕೆಯ ಪ್ರಧಾನ ಸಂಪಾದಕರು” ಹಾಗೂ “ಓದುಗರಾದ ನಿಮ್ಮೆಲ್ಲರ” ಪ್ರೋತ್ಸಾಹದೊಂದಿಗೆ ಹವ್ಯಾಸಿ ಬರಹಗಾರನಾಗಿ ಪುಟ್ಟ ಪುಟ್ಟ ಕವನ ಹಾಗೂ ಲೇಖನಗಳನ್ನು ಕೂಡ ಬರೆಯುತ್ತಿದ್ದೇನೆ. ಕಳೆದ ಎರಡು ವರ್ಷಗಳಿಂದ ನನಗೆ ಒಂದು “ಕವನ ಸಂಕಲನ ಪುಸ್ತಕ” ವನ್ನು ಮಾಡಬೇಕು ಎನ್ನುವ ಕನಸಿತ್ತು. ಆದರೆ ಇಂದು-ನಾಳೆ, ಇಂದು-ನಾಳೆ ಎನ್ನುತ್ತಾ ಎರಡು ವರ್ಷಗಳು ಕಳೆದುಹೋದವು.
ಆದರೆ 2025ರ ಈ ವರುಷವು ಆ ನನ್ನ ಪುಟ್ಟ ಕನಸಿಗೆ ಹೊಸ ರೆಕ್ಕೆಯನ್ನು ಕಟ್ಟಿತ್ತು. ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿ ತಿಂಗಳಿನ ಕೊನೆಯ ವಾರದಲ್ಲಿ ನಾನು ನನ್ನ ಕವನ ಸಂಕಲನ ಪುಸ್ತಕದ ಕೆಲಸವನ್ನು ಪ್ರಾರಂಭಿಸಿದೆ. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪುಸ್ತಕದ ಮುದ್ರಣದ ಕೆಲಸವೂ ಪೂರ್ಣಗೊಂಡಿತು. ಇನ್ನೇನು ಕೆಲವೇ ದಿನಗಳಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ. ಓದುಗರಾದ ತಾವೆಲ್ಲರೂ ಕೂಡ ನನ್ನ ಈ ಪುಟ್ಟ ಪ್ರಯತ್ನಕ್ಕೆ ಪ್ರೀತಿ-ಪ್ರೋತ್ಸಾಹವನ್ನು ನೀಡುವುದರೊಂದಿಗೆ ಪುಸ್ತಕವನ್ನು ಖರೀದಿಸಿ ಓದಿ ತಮ್ಮ ಅನಿಸಿಕೆ-ಅಭಿಪ್ರಾಯಗಳೊಂದಿಗೆ ನನ್ನನ್ನು ಆಶೀರ್ವದಿಸಬೇಕಾಗಿ ಈ ಮೂಲಕ ಪ್ರೀತಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ.
ಅದೇ ರೀತಿ ಇನ್ನೊಂದು ಮುಖ್ಯ ವಿಷಯವೇನೆಂದರೆ ನನ್ನ ಕನಸಿನ ಈ ಪುಸ್ತಕ ಮಾಡುವ ಕೆಲಸ ನನ್ನೊಬ್ಬನಿಂದ ಸಾಧ್ಯವಾಗುತ್ತಿರಲಿಲ್ಲ, ಈ ಕೆಲಸದಲ್ಲಿ ನನಗೆ ಮಾರ್ಗದರ್ಶಕರಾಗಿ ಪ್ರೋತ್ಸಾಹಿಸಿದವರು “ನನ್ನ ಜೀವನದ ಪ್ರತೀ ಹೆಜ್ಜೆಯಲ್ಲೂ ನನಗೆ ನನ್ನ ಸರಿತಪ್ಪುಗಳನ್ನು ತಿಳಿಸಿ ನನ್ನ ಬೆನ್ನೆಲುಬಾಗಿ ನಿಂತು ನನ್ನನ್ನು ಸದಾ ಪ್ರೋತ್ಸಾಹಿಸಿ ಮುನ್ನಡೆಸುತ್ತಿರುವ ನನ್ನ ತಂದೆ, ತಾಯಿ ಹಾಗೂ ನನ್ನ ತಂಗಿ”, “ನನ್ನ ಬರಹಗಳಲ್ಲಿನ ಸರಿತಪ್ಪುಗಳನ್ನು ತಿಳಿಸುವುದರೊಂದಿಗೆ ಗುರುಗಳ ಸ್ಥಾನದಲ್ಲಿ ನಿಂತು ನನ್ನನ್ನು ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಅಮರ ಸುದ್ದಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಮುರಳೀಧರ ಅಡ್ಡನಪಾರೆ” ಅವರು ಹಾಗೂ “ನನ್ನ ಅಮರ ಸುದ್ದಿ ಬಳಗದ ಸದಸ್ಯರು”, “ಕವನ ಸಂಕಲನ ಪುಸ್ತಕ ಮಾಡುವ ಕಾರ್ಯದಲ್ಲಿ ನನಗೆ ಮಾರ್ಗದರ್ಶನವನ್ನು ನೀಡುವುದರೊಂದಿಗೆ ನನ್ನ ಈ ಮೊದಲ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದ ಚಂದ್ರಾವತಿ ಬಡ್ಡಡ್ಕ” ರವರು, “ಮುನ್ನುಡಿಯನ್ನು ಬರೆದುಕೊಟ್ಟು ಪುಸ್ತಕ ಮಾಡುವ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ ಸಂಗೀತಾ ರವಿರಾಜ್ ಚೆಂಬು ರವರು”, “ಮೊದಲು ಪುಸ್ತಕವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಪಳಂಗಾಯ ರಾಮಚಂದ್ರ ಸರ್” ರವರು, “ಪುಸ್ತಕ ಮಾಡುವ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ದಿವ್ಯ ಸುಜನ್ ಗುಡ್ಡೆಮನೆ ರವರು” ಹಾಗೂ “ಪುಸ್ತಕವನ್ನು ಸುಂದರವಾಗಿ ಮುದ್ರಿಸಿಕೊಟ್ಟ ಸುಳ್ಯದ ಗಣೇಶ್ ಪ್ರಿಂಟರ್ಸ್” ರವರು ಇವರೆಲ್ಲರಿಗೂ ಕೂಡ ಈ ಸಂದರ್ಭದಲ್ಲಿ ನಾನು ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ “ನನ್ನನ್ನು ಸದಾ ಆಶೀರ್ವಾದಿಸಿ ಪ್ರೋತ್ಸಾಹಿಸುವ ಗುರು-ಹಿರಿಯರಿಗೆ, ನನ್ನ ಪ್ರೀತಿಯ ಓದುಗರಿಗೆ, ಊರಿನವರಿಗೆ, ಪರಿಚಯಸ್ಥರಿಗೆ, ಕುಟುಂಬಸ್ಥರಿಗೆ, ಸ್ನೇಹಿತರಿಗೆ, ಬಂಧು-ಮಿತ್ರರಿಗೆ” ಎಲ್ಲರಿಗೂ ಕೂಡ ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿರುವ ನನ್ನ ಈ ಪುಟ್ಟ ಕವನ ಸಂಕಲನಕ್ಕೆ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹ ಸದಾ ಇರಲಿ ಎಂದು ಪ್ರೀತಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ…
ಧನ್ಯವಾದಗಳೊಂದಿಗೆ…
ಇಂತೀ,
ನಿಮ್ಮ ಪ್ರೀತಿಯ “ಉಲ್ಲಾಸ್ ಕಜ್ಜೋಡಿ”
