
ಜಾಗತಿಕ ಭಯೋತ್ಪಾದಕತೆಯ ತವರು ಪಾಕಿಸ್ತಾನ ವಿರುದ್ಧದ ಭಾರತದ ನಿಲುವು ಹಾಗೂ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಕುರಿತು ಜಗತ್ತಿನ ಬೇರೆ ಬೇರೆ ದೇಶಗಳಿಗೆ ಮಾಹಿತಿ ನೀಡಿ ಭಾರತದ ಧ್ವನಿಯಾಗಲು ಕೇಂದ್ರ ಸರ್ಕಾರ ಒಟ್ಟು 7 ಸರ್ವಪಕ್ಷ ನಿಯೋಗಗಳನ್ನು ರಚಿಸಿದೆ. ಈ ನಿಯೋಗದಲ್ಲಿ ಸದಸ್ಯರಾಗಿ ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಸ್ಥಾನ ಪಡೆದಿದ್ದಾರೆ. ಇವರ ನಿಯೋಗದಲ್ಲಿ 8 ಜನ ಸಂಸದರಿದ್ದು, ರಷ್ಯಾ, ಸ್ಪೇನ್, ಗ್ರೀಸ್ , ಸ್ಲೋವೆನಿಯಾ , ಲಾಟ್ವಿಯಾ ಮೊದಲಾದ ಪ್ರಮುಖ ದೇಶಗಳಿಗೆ ಭೇಟಿ ಮಾಹಿತಿ ನೀಡಲಿದೆ.
