Ad Widget

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಕ್ರಿಕೆಟ್ ಪಂದ್ಯಾಟ


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಇದರ ವಿದ್ಯಾರ್ಥಿ ಸಂಘ ಮತ್ತು ಆಂತರಿಕ‌ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ತರಗತಿವಾರು ಕ್ರಿಕೆಟ್ ಪಂದ್ಯಾಟವನ್ನು ದಿನಾಂಕ 13 ಮೇ 2025ರಂದು ನಡೆಸಲಾಯಿತು. ಈ ಪಂದ್ಯಾಟಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಇವರು ತೆಂಗಿನ ಕಾಯಿ ಒಡೆಯುವುದರ ಮೂಲಕ ಚಾಲನೆಯನ್ನು ನೀಡಿದರು. ಒಟ್ಟು 10 ಪಂದ್ಯಾಟಗಳು ಜರುಗಿದವು. ಈ ಪಂದ್ಯಾಟದ ತೀರ್ಪುಗಾರರಾಗಿ ಕಾರ್ತಿಕ್ ಬಿಳಿನೆಲೆ ಇವರು ಭಾಗವಹಿಸಿದ್ದರು. ದ್ವಿತೀಯ ಬಿಕಾಂ ಎ ಪ್ರಥಮ ಸ್ಥಾನವನ್ನು, ಪ್ರಥಮ ಬಿಕಾಂ ಎ ದ್ವಿತೀಯ ಸ್ಥಾನವನ್ನು, ಪಂದ್ಯ ಪುರುಷ ಪ್ರಶಸ್ತಿಯನ್ನು ಪ್ರಸಾದ್ ದ್ವಿತೀಯ ಬಿಕಾಂ ಎ, ಉತ್ತಮ ಬೌಲರ್ ಪ್ರಶಸ್ತಿಯನ್ನು ಸ್ನೇಹಲ್ ಪ್ರಥಮ ಬಿಕಾಂ ಎ ,ಉತ್ತಮ ಬ್ಯಾಟ್ಸ್ಮನ್ ಆಗಿ ಹರ್ಷಿತ್ ದ್ವಿತೀಯ ‌ಬಿ ಕಾಂ ಎ ಪ್ರಶಸ್ತಿಯನ್ನು ಪಡೆದರು.ಈ ಪಂದ್ಯಾಟದ ವಿಜೇತರಿಗೆ‌ ಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಡಾ! ರವಿ ಕಕ್ಕೆ ಪದವು ಇವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ , ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಯೋಜಕರಾದ ಶ್ರೀಮತಿ ಲತಾ ಬಿ.ಟಿ ,ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ. ಪ್ರಸಾದ್ ಎನ್, ಸದಸ್ಯರಾದ ಶ್ರೀಮತಿ ಅಶ್ವಿನಿ ಎಸ್. ಎನ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!