
ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ, ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗಿಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ(ಡಿ. ಎಂ.ಇ.ಡಿ) ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ ಹಾಜರಾದ ಎಲ್ಲಾ 22 ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ ಮೂಲಕ ಸತತವಾಗಿ 8 ಬಾರಿ ಶೇ.100 ಫಲಿತಾಂಶ ದಾಖಲಾಗಿದೆ.













14 ವಿದ್ಯಾರ್ಥಿ ಶಿಕ್ಷಕಿಯರು ವಿಶಿಷ್ಟ ಶ್ರೇಣಿಯಲ್ಲಿ, 8 ವಿದ್ಯಾರ್ಥಿ ಶಿಕ್ಷಕಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸುನೀತಾ ಪಿ (1131), ಜನಿತಾ ಹೆಚ್(1068)ಅಸ್ಮಾ ಪಿ ಎಂ (1050), ದಿವ್ಯಾ ಕೆ (1045), ಅಕ್ಷತಾ ಎಂ (1037), ಭವಿತಾ ಕೆ (1033), ಮಮತಾ ಬಿ (1026), ವೇದಾಕ್ಷಿ (1023), ಸುಮಿತ್ರಾ ಎನ್ (995), ಮಮತಾ(982), ಶಿಲ್ಪಾ ಎ ಆರ್ (980), ಶ್ವೇತಾ ಎಸ್ (973), ರಂಜಿನಿ ಬಿ (968), ಅಂಜಲಿ ಎ ಹೆಚ್ (966)ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗಾಯತ್ರಿ, ನೇತ್ರಾ, ಶ್ವೇತಾ ಕುಮಾರಿ, ಸುಮಿತ್ರಾ ಕೆ, ಅನುಷಾ ಕೆ, ಸೀಮಾ ಜಿ, ಕಾವ್ಯ ಕೆ ಪಿ, ಸುಪ್ರೀತಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಲ್ಲಿ 2025-26ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
