
ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ಎಂಬಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡ ನಾಗನ ಕಟ್ಟೆಯ ಪ್ರತಿಷ್ಠಾ ಕಾರ್ಯಕ್ರಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ.16 ರಂದು ನೆರವೇರಿತು.
ಮೇ.15 ಸಂಜೆ ದೇವತಾ ಪ್ರಾರ್ಥನೆ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ಅಘೋರ ಹೋಮ, ಬಾದಾಕರ್ಷಣೆ, ಉಚ್ಚಾಟನೆ, ವಾಸ್ತುಹೋಮ, ನೂತನಬಿಂಬ, ಜಲಾಧೀವಾಸ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆದು, ಮೇ.16 ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷ ಬಲಿಪೂಜೆ, ಪಂಚವಿಂಶತಿ, ಕಲಶ ಪೂಜೆ ನಡೆದು ಬೆಳಿಗ್ಗೆ 9.20ರ ಮಿಥುನ ಲಗ್ನ ಶುಭಮುಹೂರ್ತ ದಲ್ಲಿ ನಾಗ ಪ್ರತಿಷ್ಠೆ ಪಂಚಾಮೃತ ಅಭಿಷೇಕ, ಪಂಚಾವಿಂಶತಿ, ಸಾನಿದ್ಯ ಕಲಶಾಭಿಷೇಕ ತಂಬಿಲ ಸೇವೆ ಮಂಗಳಾರತಿ ನಂತರ ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು
ಧರ್ಮಪಾಲ ಗೌಡ ಬಾಳೆಬೈಲು ಹಾಗೂ ಕುಟುಂಬಸ್ಥರು ಹಾಗೂ ಚಾಳೆಪ್ಪಾಡಿ ಬೈಲಸ್ಥರು ಮತ್ತು ಆ ಭಾಗದ ಭಕ್ತರ ಸಹಾಯ ಸಹಕಾರದೊಂದಿಗೆ ಪ್ರತಿಷ್ಠಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.
