ಸೇವಾಜೆ ಮಡಪ್ಪಾಡಿ ರಸ್ತೆಯಲ್ಲಿ ಸೇವಾಜೆ ಬಳಿ ಶಿಥಿಲಗೊಂಡಿದ್ದ ಸೇತುವೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಪಾರಸ್ಸಿನಂತೆ ನೂತನ ಸೇತುವೆ ನಿರ್ಮಾಣದ ಕಾಮಗಾರಿ ಮೇ.15 ರಿಂದ ನಡೆಸುವುದೆಂದು ಈ ಹಿಂದೆ ತೀರ್ಮಾನವಾಗಿತ್ತು. ಇದೀಗ ಮಳೆ ಪ್ರಾರಂಭ ಹಿನ್ನೆಲೆ ಹಾಗೂ ಸಾರ್ವಜನಿಕರ ತೊಂದರೆಯಾಗುವುದನ್ನು ಪರಿಗಣಿಸಿ ಮಳೆಗಾಲ ಕಳೆದ ನಂತರ ಕಾಮಗಾರಿ ಮಾಡಲು ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಹಾಗೂ ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ ಮಾಡಿದ್ದರು. ಇದಕ್ಕೆ ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರು ಒಪ್ಪಿಕೊಂಡಿದ್ದು, ಡಿಸೆಂಬರ್ ನಂತರ ಕಾಮಗಾರಿ ನಡೆಸಲು ತೀರ್ಮಾನಿಸಿದ್ದು ರಸ್ತೆ ಫಲಾನುಭವಿಗಳು ನಿಟ್ಟುಸಿರು ಬಿಡುವಂತಾಗಿದೆ.
- Wednesday
- May 14th, 2025