
ಕರ್ನಾಟಕ ರಾಜ್ಯ ಕಾನೂನು ವಿವಿ ಮತ್ತು ಕೆವಿಜಿ ಕಾನೂನು ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಕೆವಿಜಿ ಕ್ರೀಡಾoಗಣ ದಲ್ಲಿ 2ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಕಾನೂನು ವಿವಿ ಮಟ್ಟದ ಫುಟ್ಬಾಲ್ ಪಂದ್ಯಾಟ ಮುಕ್ತಾಯಗೊಂಡಿತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಅವರು ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಿದಾಗ ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳ ಲು ಸಾಧ್ಯ ;ಕ್ರೀಡೆ ನಮಗೆ ಬದುಕುವ ಕಲೆಯನ್ನು ತಿಳಿಸಿಕೊಡುತ್ತದೆ. ಕ್ರೀಡಾಳುಗಳು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗೈಯು ವಂತಾಗಲಿ ಎಂದು ಆಶಿಸಿದರು .ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಪ್ರೊ ಕೆವಿ ದಾಮೋದರ ಗೌಡ ಅವರು ವಹಿಸಿ ಮಾತನಾಡಿ ನಾವು ಸಾಧನೆಯ ಮೂಲಕ ಎತ್ತರಕ್ಕೆ ಏರಲು ಸಾಧ್ಯ, ಫುಟ್ಬಾಲ್ ಆಟದ ಮೂಲಕ ವಿಶ್ವ ಕ್ಕೆ ಮಾದರಿಯಾದ ಲಯನೆಲ್ ಎಂಡೆರ್ಸ್ ಮೆಸಿ ಅವರು ತಮ್ಮ ಪ್ರಯತ್ನ, ಛಲ, ಶಿಸ್ತು ಬದ್ಧ ಆಟ,ತಂಡದಲ್ಲಿ ಹೊಂದಾಣಿಕೆ ಗುಣದಿಂದ ಬೆಳೆದವರು. ಈ ಗುಣಗಳನ್ನು ಕ್ರೀಡಾಪಟುಗಳು ಮೈಗೂಡಿಸಿ ಕೊಂಡಾಗ ಗೆಲುವು ನಿಶ್ಚಿತ ಎಂದರು. ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.ವೇದಿಕೆಯಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಡಾ ಉದಯ ಕೃಷ್ಣ ಬಿ., ಉಪನ್ಯಾಸಕಿ, ಕ್ರೀಡಾ ಸಂಯೋಜಕಿ ರಶ್ಮಿ ಹೆಚ್, ಸಂಸ್ಥೆಯ ದೈ ಶಿ ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ, ಎನ್ನೆoಸಿಯ ದೈ ಶಿ ನಿರ್ದೇಶಕರಾದ ಲೆ. ಸೀತಾರಾಮ ಎಂ ಡಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದೈ ಶಿ ನಿರ್ದೇಶಕ ಮಿಥನ್ ಉಪಸ್ಥಿತರಿದ್ದರು.ಕ್ರೈಸ್ಟ್ ಲಾ ಕಾಲೇಜು ಬೆಂಗಳೂರು (ಪ್ರಥಮ), ಎಂ ಎಸ್ ರಾಮಯ್ಯ ಲಾ ಕಾಲೇಜು ಬೆಂಗಳೂರು (ದ್ವಿತೀಯ),
ಎಸ್ ಡಿ ಎಂ ಲಾ ಕಾಲೇಜು ಮಂಗಳೂರು(ತೃತೀಯ), ಕೆ. ಎಲ್. ಇ. ಲಾ ಕಾಲೇಜು, ಬೆಂಗಳೂರು (ಚತುರ್ಥ)ಸ್ಥಾನ ಪಡೆದು ವಿಜಯಿ ಯಾದರು. ಬೆಸ್ಟ್ ಗೋಲ್ ಕೀಪರ್ ಆಗಿ ಗೌರವ್ ಲಾಲ್, ಕ್ರೈಸ್ಟ್ ಲಾ ಕಾಲೇಜು, ಬೆಂಗಳೂರು, ಬೆಸ್ಟ್ ಡಿಫೆಂಡರ್ ಆಗಿ ತಂಗಮಿನ್ ಸೆಮ್ ಕೋನ್ಗಸೈ, ಕ್ರೈಸ್ಟ್ ಅಕಾಡೆಮಿ ಲಾ ಕಾಲೇಜು ಬೆಂಗಳೂರು, ಹಾಗೂ ಬೆಸ್ಟ್ ಪ್ಲೇಯರ್ ಆಗಿ ಫಾಕ್ಯೂ, ಎಂ ಎಸ್ ರಾಮಯ್ಯ ಲಾ ಕಾಲೇಜು, ಬೆಂಗಳೂರು ಇವರು ಹೊರಹೊಮ್ಮಿದರು. ಮುಖ್ಯ ಅತಿಥಿ ಪ್ರವೀಣ್ ಶೆಟ್ಟಿ ಬಹುಮಾನ ವಿತರಿಸಿದರು.
ವಿದ್ಯಾರ್ಥಿನಿಯರಾದ ರಮ್ಯ ಮತ್ತು ಬಳಗದವರು ಪ್ರಾರ್ಥಿಸಿ, ಪ್ರಾoಶುಪಾಲರಾದ ಡಾ ಉದಯ ಕೃಷ್ಣ ಬಿ ಸ್ವಾಗತಿಸಿ, ಉಪನ್ಯಾಸಕಿ ರಶ್ಮಿ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ನಿರೂಪಿಸಿ, ವಿದ್ಯಾರ್ಥಿನಿ ಯಶಸ್ವಿನಿ ವಿಜೇತರ ಪಟ್ಟಿ ವಾಚಿಸಿದರು.
