
ಸೇವಾಜೆ – ಮಡಪ್ಪಾಡಿ ರಸ್ತೆಯ ಸೇವಾಜೆ ಎಂಬಲ್ಲಿ ಶಿಥಿಲಗೊಂಡಿದ್ದ ಸೇತುವೆ ತೆಗೆದು ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭ ಹಿನ್ನಲೆಯಲ್ಲಿ ಮೇ. 15 ಗುರುವಾರದಿಂದ ಸೇವಾಜೆ ಮಡಪ್ಪಾಡಿ ರಸ್ತೆ ಸಂಚಾರಕ್ಕೆ ಬಂದ್ ಮಾಡಲಾಗುವುದು. ಮಡಪ್ಪಾಡಿ ಸಂಪರ್ಕಿಸುವವರು ಮಾವಿನಕಟ್ಟೆ ದೇವ ರಸ್ತೆಯ ಮುಖಾಂತರ ತೆರಳಬೇಕಾಗುತ್ತದೆ. ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿಕೊಂಡು ಕಾಮಗಾರಿಗೆ ಸಹಕರಿಸುವಂತೆ ದೇವಚಳ್ಳ ಮತ್ತು ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
