ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಪರೀಕ್ಷೆ 2ರ ಸಿದ್ಧತಾ ತರಗತಿಗಳು ಮೇ.5ರಿಂದ ಆರಂಭಗೊಳ್ಳಲಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಾ ವಿಷಯಗಳಿಗೆ ಅನುಭವಿ ಶಿಕ್ಷಕರಿಂದ ತರಗತಿ ನಡೆಯಲಿದೆ. ಇಲ್ಲಿ 2024-25ನೇ ಸಾಲಿನಲ್ಲಿ ದೈನಂದಿನ ಟ್ಯೂಷನ್ ತರಗತಿಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದ ಅಥವಾ ಫಲಿತಾಂಶವನ್ನು ಸುಧಾರಣೆ ಮಾಡಿಕೊಳ್ಳಬಯಸುವ ವಿದ್ಯಾರ್ಥಿಗಳು ಪರೀಕ್ಷೆ 2ರ ತರಗತಿಗೆ ಹಾಜರಾಗಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
