Ad Widget

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮೂವರು ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್. ಸ್ಕಾಲರ್ ಶಿಪ್ ಗೆ ಆಯ್ಕೆ

8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುವ ಎನ್.ಎಂ.ಎಂ.ಎಸ್. ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಮರಮೂಡ್ನೂರು ಗ್ರಾಮದ ಕುಂಟಿಕಾನ ಮನೆ ಸತೀಶ್ ಆಚಾರ್ಯ ಮತ್ತು ಪುಣ್ಯ ದಂಪತಿಗಳ ಪುತ್ರಿ ವಿನಮ್ರ ಕೆ. ಎಸ್., ಕುಂಟಿಕಾನ ಮನೆ ಚಂದ್ರಶೇಖರ ಮತ್ತು ಗೀತಾ ದಂಪತಿಗಳ ಪುತ್ರ ಅಕ್ಷಯ್ ಕೆ.ಸಿ., ಕುಕ್ಕುಜಡ್ಕ ಮನೆ ರಾಘವ ಆಚಾರ್ಯ...

ರಜತ ಸಂಭ್ರಮದಲ್ಲಿ ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ – ಮೇ 10 ಹಾಗೂ 11 ರಂದು ಬೆಳ್ಳಿ ಹಬ್ಬ ಆಚರಣೆ

ಸುಳ್ಯ: ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿ ಹಬ್ಬ ಆಚರಣೆ 'ರಜತ ಸಂಭ್ರಮ' ಮೇ.10 ಮತ್ತು 11 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ನಡೆಯಲಿದೆ ಎಂದು ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಮತ್ತು ಬೆಳ್ಳಿಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ ಜೆ ರೈ ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ...
Ad Widget

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆ 79 ಶೇ. ಫಲಿತಾಂಶ

2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆ 79 ಶೇ. ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 19 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿ 79% ಫಲಿತಾಂಶ ದಾಖಲಿಸಿದೆ. ಅಖಿಲ ಎಂ (584) D/O ಸುಬ್ರಹ್ಮಣ್ಯ ಎ ಮತ್ತು ಪ್ರಿಯಾ ಎಂ ದುಗ್ಗಲಡ್ಕ, ಫಾತಿಮತ್ ಜೆಝಿಲ (581) D/O ಮೊಹಮ್ಮದ್...

ಅರಂತೋಡು : ಬೈಕ್ ಹಾಗೂ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ – ಸವಾರನಿಗೆ ಗಂಭೀರ ಗಾಯ

ಮಾಣಿ ಮೈಸೂರು ಹೆದ್ದಾರಿಯ ಅರಂತೋಡು ಸಮೀಪ ವೈಎಂಕೆ ಎಂಬಲ್ಲಿ ಕಾರೊಂದು ಬೈಕ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆ ಇದೀಗ ನಡೆದಿದೆ. ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಬೈಕ್ ಸವಾರ ಅರಂತೋಡಿನ ನಿತಿನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಎಸ್ ಎಸ್ ಎಲ್ ಸಿ ಬೆಳ್ಳಾರೆ ಜ್ಞಾನದೀಪ ಸಂಸ್ಥೆಗೆ ಉತ್ತಮ ಫಲಿತಾಂಶ

8-9ನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಅಥವಾ ಓದು ನಿಲ್ಲಿಸಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಐದು ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 80 ಫಲಿತಾಂಶ ದಾಖಲಾಗಿದೆ. ಶ್ರಾವ್ಯ ಎನ್ ಎಂ (424), ಪ್ರಸ್ತಿ ಬಿ ಎಸ್ (374), ಗಗನ್...

ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪರಿಣಿತ.ಹೆಚ್.ಆರ್ ಗೆ ಎಸ್.ಎಸ್.ಎಲ್.ಸಿ ಯಲ್ಲಿ 616 ಅಂಕ

ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಕಲ್ಲುಗುಂಡಿ ಇಲ್ಲಿನ ವಿದ್ಯಾರ್ಥಿನಿ ಪರಿಣಿತ.ಹೆಚ್.ಆರ್ 616 ಅಂಕಗಳನ್ನು ಗಳಿಸಿದ್ದಾರೆ.ಇವರು ಚೆಂಬು ಗ್ರಾಮದ ಕೃಷಿಕರಾದ ಹೊಸೂರು ರವಿರಾಜ್ ಹಾಗೂ ಶ್ರೀಮತಿ ಸಂಗೀತ ದಂಪತಿಗಳ ಪುತ್ರಿ.(ವರದಿ : ಉಲ್ಲಾಸ್ ಕಜ್ಜೋಡಿ)

ಎಸ್.ಎಸ್.ಎಲ್.ಸಿ ಫಲಿತಾಂಶ : ಹರಿಹರ ಪಳ್ಳತ್ತಡ್ಕ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಎಸ್.ಎಸ್.ಎಲ್.ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಹರಿಹರ ಪಳ್ಳತ್ತಡ್ಕ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.ಇಲ್ಲಿ ಮೂವರು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಮೂವರು ಕೂಡ ತೇರ್ಗಡೆ ಹೊಂದಿದ್ದು, ಲಿಶ್ಮಿತಾ.ಕೆ 560 ಅಂಕ, ಚೈತನ್ಯ.ಪಿ 445 ಅಂಕ, ಸಿಂಚನಾ.ಕೆ.ಯು 410 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ

ಕೊಲ್ಲಮೊಗ್ರದ ಮಿಥುನ್ ಕುಮಾರ್ ಸೋನ ರವರು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡುವ ಮೂಲಕ ಮಾದರಿಯಾಗಿದ್ದು, ಸುಳ್ಯದ ಅಮೃತಗಂಗಾ ಸಮಾಜಸೇವಾ ಸಂಸ್ಥೆಯ ಅಮೃತಕೇಶ ಕೂದಲು ದಾನ ಅಭಿಯಾನದ ಮೂಲಕ ಈ ಸೇವಾ ಕಾರ್ಯಕ್ಕೆ ಮುಂದಾದ ಮಿಥುನ್ ಕುಮಾರ್ ಸೋನ ರವರು ಕಳೆದ ಮೂರು ವರ್ಷಗಳಿಂದ ತನ್ನ ಕೂದಲನ್ನು ಬೆಳೆಸಿ ಆರೈಕೆ ಮಾಡಿದ್ದು, ಅಮೃತಗಂಗಾ ಸಮಾಜಸೇವಾ ಸಂಸ್ಥೆಯ ಮೂಲಕ...
error: Content is protected !!