
ಅಂಗ ವೈಕಲ್ಯದ ನಡುವೆ ಎಸ್.ಎಸ್.ಎಲ್.ಸಿ. ಯಲ್ಲಿ ತಶ್ವಿನ್ ಉತ್ತಮ ಸಾಧನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಕಿನ್ನಿಗೋಳಿಯ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಶ್ವಿನ್ ಎಸ್.ಎಸ್.ಎಲ್.ಸಿ.ಯಲ್ಲಿ 606 ಅಂಕ ಪಡೆದಿದ್ದಾನೆ. ತಶ್ವಿನ್ ಗೆ ಕಾಲಿನ ಸಮಸ್ಯೆಯಿದ್ದು ಎಲ್ಲರಿಗಿಂತ ಕಡಿಮೆ ಎತ್ತರವಿದ್ದರೂ ಉತ್ತಮ ಸಾಧನೆಯ ಮೂಲಕ ಎತ್ತರಕ್ಕೇರಿದ್ದಾನೆ. ಈತ ನಾಲ್ಕೂರು ಗ್ರಾಮದ ಕುಕ್ಕುಜೆ ಗಂಗಾಧರ ಹಾಗೂ ಲೀಲಾವತಿ ದಂಪತಿಗಳ ಪುತ್ರ.
