- Friday
- May 2nd, 2025

2024-25 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಘೋಷಣೆಯಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲಾ ವಿಭಾಗವು 78% ಫಲಿತಾಂಶ ದಾಖಲಾಗಿದೆ. ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮದಿಂದ ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 7 ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಅನ್ವಿತ್. ಎಂ.ವಿ 565, ಕೃತಿಕಾ 562,ಬೃಂದಾ ಎಂ.ವಿ...

ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರೋಟರಿ ಪ್ರೌಢಶಾಲಾ ವಿದ್ಯಾರ್ಥಿ ವೇದಾಂತ್ ಕೆ ಎಸ್ 625 ರಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ‌್ಯಾಂಕ್ ಪಡೆದಿರುತ್ತಾನೆ. ಈತ ಕೋಲ್ಚಾರಿನ ಶ್ರೀಮತಿ ಮಾಲತಿ ಕೆ ಮತ್ತು ಶ್ರೀ ಶಿವಪ್ರಸಾದ್ ಕೆ ಬಿ ಇವರ ಪುತ್ರ.
ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರೋಟರಿ ಪ್ರೌಢಶಾಲೆಯ 63 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 29 ವಿದ್ಯಾರ್ಥಿಗಳು 90 ಶೇಕಡಾಕ್ಕಿಂತ ಅಧಿಕ ಅಂಕ ಪಡೆದು ಎ ಪ್ಲಸ್ ದರ್ಜೆ ಗಳಿಸಿಕೊಂಡಿದ್ದಾರೆ ಹಾಗೂ 18 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.623 ಅಂಕಗಳಿಸಿದ ವೇದಾಂತ್ ಕೆ...

ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಫಾಝಿಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್.ಐ.ಎ.) ಗೆ ವಹಿಸುವಂತೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟರು ಕೇಂದ್ರ ಗೃಹಸಚಿವ ಅಮಿತ್ ಷಾ ರವರಿಗೆ ಮನವಿ ಮಾಡಿದ್ದಾರೆ. ಇದು ಕೇವಲ ಒಂದು ಕೊಲೆಕೃತ್ಯವಲ್ಲ. ಇದರ ಹಿಂದೆ ದೇಶದಲ್ಲಿ ಅಸ್ಥಿರತೆ...

2024-2025 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಗುತ್ತಿಗಾರಿನ ಕುರಿಯಕೋಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಚಿರಸ್ವಿ ಕುಕ್ಕಪ್ಪನಮನೆ 625 ರಲ್ಲಿ624 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ರ‌್ಯಾಂಕ್ ಪಡೆದಿದ್ದಾರೆ. ಇವರು ದೇವಚಳ್ಳ ಗ್ರಾಮದ ಕರಂಗಲ್ಲು ಹೊಸೋಳಿ ಗಿರಿಧರ ಗೌಡ ಕುಕ್ಕಪ್ಪನ ಮನೆ ಮತ್ತು ಶ್ರೀಮತಿ ಸೌಮ್ಯ ದಂಪತಿಗಳ ಪುತ್ರಿ.
ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಗೆ 90.32 ಶೇ. ಫಲಿತಾಂಶ ದಾಖಲಾಗಿದೆ.31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 28 ಮಂದಿ ಪಾಸಾಗಿದ್ದಾರೆ. ಗೌತಮಿ ಆರ್ ಕೆ 575, ಶರಣ್ಯ ಕೆ ಎನ್ 565, ವಿನ್ಯಾ 560, ತೃಪ್ತಿ ಕೆ ಆರ್ 559, ನಿತೀಶ್ ಎನ್ 551, ಕೃತಿ ಎನ್ 524 ಅಂಕ ಪಡೆದಿದ್ದಾರೆ.
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯವು ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಒಟ್ಟು 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ. ಎ+ 41 ಮಂದಿ, ಎ 34 ಮಂದಿ, ಬಿ+ 16 ಮಂದಿ, ಬಿ 8 ಮಂದಿ, ಒಬ್ಬರು c+ ಶ್ರೇಣಿ ಪಡೆದಿದ್ದಾರೆ. ಅಕ್ಷರಿ ಆರ್ ಎಸ್ 619,...

ಬಜಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು (ಮೇ 2 ರಂದು) ಬಂದ್ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸುಳ್ಯದಲ್ಲೂ ಬಂದ್ ಯಶಸ್ವಿಯಾಗಿದ್ದು ಎಲ್ಲಾ ವರ್ತಕರು ಸ್ವಯಂ ಪ್ರೇರಿತ ಬಂದ್ ಸಹಕರಿಸಿದ್ದಾರೆ.