- Wednesday
- April 30th, 2025

ತೊಡಿಕಾನ ಗ್ರಾಮದ ಬೊಳ್ಳೂರು ಪದ್ಮಯ್ಯ ರವರ ಮನೆಗೆ ಎ.29 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಯಾದ ಘಟನೆ ನಡೆದಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಪಕಾಸು ಹಾಗೂ ಹಂಚಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಲವಲವಿಕೆ ಮತ್ತು ಚುರುಕುತನದ ಯಶಸ್ಸಿ, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪ್ರಯತ್ನದ ಕಲ್ಪನಯೊಂದಿಗೆ "ಚೆಸ್"ತರಬೇತಿಯನ್ನು ಚೆಸ್ ನುರಿತ ಶಿಕ್ಷಕರಿಂದ ಗುತ್ತಿಗಾರಿನ ಗ್ರಾಮ ಪಂಚಾಯತ್ ನ ಪ. ವರ್ಗದ ಸಭಾ ಭವನದಲ್ಲಿ ಮೆ. 5 ರಿಂದ ಪ್ರಾರಂಭವಾಗಲಿದೆ. ಬೆಳಿಗ್ಗೆ 9ರಿಂದ ಮದ್ಯಾಹ್ನ 1ರವರೆಗೆ ತರಬೇತಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಶ್ರವಣಬೆಳಗೊಳ ಜಂಟಿಯಾಗಿ ಪ್ರಾಕೃತ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್ ನ್ನು ಇತಿಹಾಸ ವಿಭಾಗದ ಮುಖ್ಯಸ್ಥರು ಡಾ ಪ್ರಸಾದ. ಎನ್ ಹಾಗೂ ಇತಿಹಾಸ ಉಪನ್ಯಾಸಕಿ ನಮಿತಾ ಎಂ ಎ ಅವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷವೂ ನಡೆಸಲಾಗುತ್ತದೆ. ಈ ಕೋರ್ಸಿಗೆ...

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹರಿಹರ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಗ್ರಾಮಸ್ಥರಿಂದ ಹಿಂದೂ ಪರಿವಾರ ಸಂಘಟನೆಗಳು ಹರಿಹರ ಪಳ್ಳತ್ತಡ್ಕ ಇದರ ನೇತೃತ್ವದಲ್ಲಿ ಸಂಜೆ 6:00 ಗಂಟೆಗೆ ಹರಿಹರ ಪಳ್ಳತ್ತಡ್ಕದ ಮುಖ್ಯ ಪೇಟೆಯಲ್ಲಿ “ಬೃಹತ್ ಪಂಜಿನ ಮೆರವಣಿಗೆ ಹಾಗೂ ಶ್ರದ್ದಾಂಜಲಿ ಸಭೆ” ನಡೆಯಲಿದ್ದು, ಪಂಜಿನ...