
ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಅಭಿಯಾನ ದ ಅಂಗವಾಗಿ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತೆಯ ನಿರಂತರ 71 ತಿಂಗಳ ಕಾರ್ಯಕ್ರಮ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ದಿನಾಂಕ 27.4.2025ನೇ ಆದಿತ್ಯವಾರ ದಂದು ಬೆಳಿಗ್ಗೆ 7.30ರಿಂದ 9.30ರ ವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ ಸದಸ್ಯರಲ್ಲದೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಘನ ಮತ್ತು ದ್ರವ ತ್ಯಾಜ್ಯ ಘಟಕದ ಸಿಬ್ಬಂದಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಊರ ನಾಗರೀಕ ಬಂಧುಗಳು ಭಾಗವಹಿಸಿದ್ದರು.
