- Sunday
- April 27th, 2025

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವು ಎ.26 ರಂದು ನಡೆಯಿತು. ಬೆಳಿಗ್ಗೆ 108 ತೆಂಗಿನಕಾಯಿ ಗಣಹೋಮ,ಮಧ್ಯಾಹ್ನ ನವಕ,ಪವಮಾನಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ರಾತ್ರಿ ಶ್ರೀ ದೇವರಿಗೆ...

ಪಹಲ್ಗಾಮ್ ನಲ್ಲಿ ನಡೆದಿರೋ ಭಯೋತ್ಪಾದಕ ದಾಳಿ ಅತ್ಯಂತ ಖಂಡನೀಯ. ಉಗ್ರವಾದ ಮನುಷ್ಯತ್ವದ ವಿರುದ್ದವಾದುದಾಗಿದೆ. ಉಗ್ರವಾದೀ ಮನೋಭಾವವೇ ಜಗತ್ತಿನಿಂದ ತೊಲಗಬೇಕಿದೆ. ಅದಕ್ಕಾಗಿ ಆಢಳಿ ಯಾವ ಪಕ್ಷದವರು ಮಾಡುತ್ತಿದ್ದರೂ ದೇಶದ ಪ್ರಜೆಗಳಾಗಿ ಆಢಳಿತದ ಬೆಂಬಲಕ್ಕೆ ನಿಲ್ಲಬೇಕಿರುವುದು ಪ್ರಜೆಗಳ ಕರ್ತವ್ಯ .ಹಾಗಿದ್ದರೂ ಆತ್ಮವಿಮರ್ಶೆ ಅತ್ಯಂತ ಅಗತ್ಯವಾಗಿದೆ ದೇಶದ ರಕ್ಷಣಾ ಬಜೆಟಿನ ಸಿಂಹ ಗಾತ್ರದ ಮೊತ್ತ ವ್ಯಯಿಸಲ್ಪಡುತ್ತಿರೋದು ಜಮ್ಮು ಕಾಶ್ಮಿರದಲ್ಲಾಗಿದೆ. ಬಿಜೆಪಿಯವರ...

ಸಮಾಜದಲ್ಲಿ ಮುಖ್ಯ ವ್ಯಕ್ತಿಗಳಾಗಿ ಬಾಳುವುದನ್ನು ಕಲಿಯಬೇಕು. ವಿದ್ಯಾವಂತರಾಗಿ ಯಾವುದಾದರೂ ಹುದ್ದೆಯನ್ನು ಗಳಿಸುವುದರೊಂದಿಗೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಆ ಮೂಲಕ ಸಮಾಜ ನಮ್ಮನ್ನು ಗುರುತಿಸುವಂತಾಗಬೇಕು. ಯುವಜನರು ಯಾವುದೇ ಸಂಧಿಗ್ದತೆ ಯಲ್ಲೂ ಆತ್ಮಹತ್ಯೆ ಯಂತಹ ದುಸ್ಸಾಹಾಸಕ್ಕೆ ಕೈ ಹಾಕದೆ ಸ್ವಾಭಿಮಾನದ ಬದುಕು ರೂಪಿಸುವಲ್ಲಿ ಶ್ರಮಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಹೇಳಿದರು....

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವವು ಏ.30 ರಿಂದ ಮೇ.01 ರವರೆಗೆ ನಡೆಯಲಿದ್ದು, ಏ.30 ರಂದು ಭಂಢಾರ ಬರುವುದು ಹಾಗೂ ಮೇ.01 ರಂದು ನೇಮ ನಡಾವಳಿ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಅಭಿಯಾನ ದ ಅಂಗವಾಗಿ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತೆಯ ನಿರಂತರ 71 ತಿಂಗಳ ಕಾರ್ಯಕ್ರಮ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ದಿನಾಂಕ 27.4.2025ನೇ ಆದಿತ್ಯವಾರ ದಂದು ಬೆಳಿಗ್ಗೆ 7.30ರಿಂದ 9.30ರ ವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ ಸದಸ್ಯರಲ್ಲದೆ ಗ್ರಾಮ ಪಂಚಾಯತ್...