
ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್ , ಗ್ರಾಹಕರಾದ ಶಾಫಿ ಬೊಳುಬೈಲು, ನಿವೃತ್ತ ರೇಂಜರ್ ರಾಧಾಕೃಷ್ಣ ಕುರುಂಜಿಗುಡ್ಡೆ, ಹಾಜಿ ಇಬ್ರಾಹಿಂ ಖತ್ತಾರ್ , ಬ್ರಾಂಚ್ ಮೇನೆಜರ್ ಸಾಬು ಜಾನ್, ಸೇಲ್ಸ್ ಮೇನೇಜರ್ ನವನೀತ್ , ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸುಳ್ಯದಲ್ಲಿ ಶೋರೂಂ ತೆರೆಯಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
