- Friday
- April 25th, 2025

ಕುಕ್ಕೆಸುಬ್ರಹ್ಮಣ್ಯದ ಹಿಂದೂ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ಎ.25 ರಂದು ಕುಕ್ಕೆಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ನಿವೃತ್ತ ಅಧಿಕಾರಿ ಅಶೋಕ್ ಮೂಲೆಮಜಲು, ಉಪನ್ಯಾಸಕ ಪದ್ಮ ಕುಮಾರ್ ಗುಂಡಡ್ಕ ಘಟನೆ...

ಸುಳ್ಯದ ಓಡಬಾಯಿನಲ್ಲಿ ಶುಭಾರಂಭಗೊಂಡ ಟೊಯೋಟಾ ಶೋರೂಂ – ಉದ್ಘಾಟನೆ ನೆರವೇರಿಸಿದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್
ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್ , ಗ್ರಾಹಕರಾದ ಶಾಫಿ ಬೊಳುಬೈಲು, ನಿವೃತ್ತ ರೇಂಜರ್ ರಾಧಾಕೃಷ್ಣ ಕುರುಂಜಿಗುಡ್ಡೆ, ಹಾಜಿ ಇಬ್ರಾಹಿಂ...

ಕಾಶ್ಮೀರದ ಪಹಲ್ಗಮ್ ಲ್ಲಿ ನಡೆದ ಉಗ್ರರ ಹೇಯ ಕೃತ್ಯವನ್ನು ಖಂಡಿಸುವ ವಿಚಾರದಲ್ಲಿ ಯೂ ಟ್ಯೂಬ್ ಚಾನೆಲ್ ನಿರೂಪಕರೊಬ್ಬರು ಬಿಜೆಪಿ ಪಕ್ಷದ ಬಗ್ಗೆ ಅಸಹ್ಯಕಾರ, ಕೆಟ್ಟ ಪದ ಬಳಸಿರುವುದನ್ನು ಬಿಜೆಪಿ ಮಂಡಲ ಸಮಿತಿ ಖಂಡಿಸುತ್ತದೆ. ವಿಜೆ ವಿಖ್ಯಾತ್ ಬಗ್ಗೆ ನಮಗೆ ಗೌರವವಿತ್ತು.ಹಳ್ಳಿ, ಬಡತನದಿಂದ ಬಂದ ಹುಡುಗ ಏನೋ ಒಂದಷ್ಟು ಒಳ್ಳೆಯ ಕಾರ್ಯ ಮಾಡುತ್ತಿದ್ದೇನೆಂಬ ಭಾವನೆಯಿತ್ತು. ಆದರೆ ಕಾಶ್ಮೀರದಲ್ಲಿ...