
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ವತಿಯಿಂದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ದಿನಾಂಕ 21/04/2025ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ .ಟಿ ವಹಿಸಿದರು. ಕಾರ್ಯಕ್ರಮದಲ್ಲಿ, ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಘಟಕವನ್ನು ಹುಟ್ಟು ಹಾಕಿದ ಕೆ ಎಸ್ ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ ಕೆ ರಂಗಯ್ಯ ಶೆಟ್ಟಿಗಾರ್ ಅವರು ಈ ಘಟಕವು ಸಂಸ್ಥೆಯ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗವನ್ನು, ಉಚಿತ ಬಸ್ ಪಾಸ್, ಅಧ್ಯಯನ ಪ್ರವಾಸಕ್ಕೆ ಅನುಮತಿ ಹಾಗೂ ವ್ಯವಸ್ಥೆಯನ್ನು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನ ಸಹಾಯವನ್ನು ನೀಡುತ್ತಿತ್ತು ಎಂಬುದನ್ನು ತಿಳಿಸಿದರು. ಬೆಂಗಳೂರು ಘಟಕದ ಅಧ್ಯಕ್ಷ ಮತ್ತು ಜನರಲ್ ಮೆನೇಜರ್ (ಹೆಚ್ ಆರ್)ಎಸ್ಎಲ್ಆರ್ ಮೆಟಾಲಿಕ್ಸ್ ಲಿಮಿಟೆಡ್ ಬೆಂಗಳೂರಿನ ಪುರುಷೋತ್ತಮ ಆಲ್ಕಬೆ, ಗೌರವ ಕಾರ್ಯದರ್ಶಿ ಮತ್ತು ಲಯಸನಿಂಗ್ ಆಫೀಸರ್, ಪ್ರಗತಿ ಗ್ರೂಪ್ ಆಫ್ ಕಂಪೆನೀಸ್, ಮೈಸೂರಿನ ಧನಂಜಯ ಕಶ್ಯಪು, ಖಜಾಂಜಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಬೆಂಗಳೂರಿನ ರಾಧಾಕೃಷ್ಣ ,ಸಮಿತಿ ಸದಸ್ಯ ಮತ್ತು ಮಾಲೀಕರು, ಶ್ರೀಲಕ್ಷ್ಮೀ ಜನಾರ್ದನ ಇಲೆಕ್ಟ್ರಿಕಲ್ಸ್,
(ಇಂಜಿನಿಯರ್ಸ್ & ಕಂಟ್ರಾಕ್ಟರ್ಸ್), ಬೆಂಗಳೂರಿನ ದಾಮೋದರ ಎ ಶೆಟ್ಟಿ ಅವರೆಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಘಟಕದ ಅನುಭವಗಳನ್ನು ಹಂಚಿಕೊಂಡರು. ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ವಿಮಲ ರಂಗಯ್ಯ, ಪ್ರಸ್ತುತ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾಯರ್ ಮತ್ತು ಕಾಲೇಜಿನ ಐ ಕ್ಯೂ ಎ ಸಿ ಸಂಯೋಜಕಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲತಾ ಬಿ ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಿಗೆ ದತ್ತಿ ನಿಧಿಯನ್ನು ಬೆಂಗಳೂರು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಸ್ತಾಂತರಿಸಿದರು.
ಕಾರ್ಯಕ್ರಮದ ಸಂಯೋಜಕಿ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶೀಲತಾ ಕಮಿಲ ಸ್ವಾಗತಿಸಿ, ಪ್ರಸ್ತುತ ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ ಕಳಿಗೆ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪುಷ್ಪಾ.ಡಿ ನಿರೂಪಿಸಿದರು.
