
ಜಮ್ಮು ಕಾಶ್ಮೀರದ ಪಹಲ್ಗಾಂವ್ ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎ. 23 ರಂದು ಪೂರ್ವಾಹ್ನ 11.00 ರಿಂದ 12.00 ಗಂಟೆಯ ತನಕ ಎಲ್ಲಾ ವ್ಯಾಪಾರ ವ್ಯವಹಾರ ಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತ ಬಂದ್ ನಡೆಸಿದರು. ಹಾಗೂ ಅರಂತೋಡು ರಿಕ್ಷಾ ನಿಲ್ದಾಣ ದ ಬಳಿ ಸೇರಿ ಪ್ರತಿಭಟನೆ ನಡೆಸಲಾಯಿತು. ಎಲ್ಲಾ ವ್ಯಾಪಾರಸ್ಥರು, ರಿಕ್ಷಾ, ಕಾರು, ವ್ಯಾನ್ ಚಾಲಕ ಮಾಲಕರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.
