
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಹತ್ಯೆಯನ್ನು ಖಂಡಿಸಿ ಗುತ್ತಿಗಾರಿನಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಗುತ್ತಿಗಾರಿನ ವರ್ತಕರ ಸಂಘ, ಜೀಪು ಚಾಲಕ ಮಾಲಕರ ಸಂಘೆ, ಆಟೋ ಚಾಲಕ ಮತ್ತು ಮಾಲಕರ ಸಂಘ, ಹಾಗೂ ಸರ್ವಧರ್ಮದ ನಾಗರಿಕ ಬಂಧುಗಳು ಭಾಗವಹಿಸಿದ್ದರು. ವೆಂಕಟ್ ದಂಬೆಕೋಡಿ ಮಾತನಾಡಿ ಧರ್ಮ ನೋಡಿ ಹತ್ಯೆಗೈದ ಉಗ್ರರ ಮನಸ್ಥಿತಿಯನ್ನು ಖಂಡಿಸಿದರು. ಕಿಶೋರ್ ಕುಮಾರ್ ಪೈಕ ವಂದಿಸಿದರು.
