
ಜಮ್ಮು ಕಾಶ್ಮೀರದ ಪಹಲ್ಗಾವ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಸುಳ್ಯ ನಗರದಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ಸ್ವಯಂ ಪ್ರೇರಿತ ಬಂದ್ ಮಾಡಿ, ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಮಾತನಾಡಿ ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಎಲ್ಲರೂ ಒಗ್ಗಟ್ಟಾಗಬೇಕಿದೆ. ಉಗ್ರರಿಗೆ ತಕ್ಕ ಶಿಕ್ಷೆ ಆಗುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಭಯೋತ್ಪಾದಕ ಕೃತ್ಯ ಕೊನೆಗಾಣಿಸಲು ಸೈನಿಕರಿಗೂ ನಾವು ಶಕ್ತಿ ನೀಡೋಣ ಎಂದು ಹೇಳಿದರು.
ರಾಜೇಶ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ ಮಾತನಾಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ, ಹರೀಶ್ ಕಂಜಿಪಿಲಿ, ಅಶೋಕ್ ಪ್ರಭು, ಸುಧಾಕರ ಕಾಮತ್ ಅಡ್ಕಾರು, ದಾಮೋದರ ಮಂಚಿ, ವೆಂಕಟ್ರಮಣ ಮುಳ್ಯ, ನಾರಾಯಣ ಶಾಂತಿನಗರ ಸೇರಿದಂತೆ ಸುಳ್ಯ ನಗರದ ವರ್ತಕರು, ರಿಕ್ಷಾ ಚಾಲಕರು, ಹಿಂದೂ ಸಂಘಟನೆಯ ಸದಸ್ಯರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.
