Ad Widget

ಈಶ್ವರ ಗೌಡ (ಬಾಬು) ಕಟ್ಟ ಗೋವಿಂದನಗರ ನಿಧನ

ಕೊಲ್ಲಮೊಗ್ರ ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಈಶ್ವರ ಗೌಡ (ಬಾಬು) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃದಲ್ಲಿ ಎ.18 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಾಯತ್ರಿ , ಪುತ್ರಿ ವನಿತಾ ತೀರ್ಥರಾಮ, ಪುತ್ರ ನವೀನ್ ಕುಮಾರ್, ಸಹೋದರರಾದ ಮಂಜಪ್ಪ ಗೌಡ , ಶೇಷಪ್ಪ ಗೌಡ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೆಸ್ಕಾಂನ ಬೆಳ್ಳಾರೆ, ಗುತ್ತಿಗಾರು ಹಾಗೂ ಪಂಜ ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಬೆಳ್ಳಾರೆ, ಗುತ್ತಿಗಾರು ಹಾಗೂ ಪಂಜ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ. ಬೆಳ್ಳಾರೆ ಶಾಖೆಯ ಸದಸ್ಯರಾಗಿ ಕರುಣಾಕರ ಆಳ್ವ ಕೊಡಿಯಾಲ, ಉಷಾ ಗಂಗಾಧರ ಇಂದಿರಾನಗರ ಬೆಳ್ಳಾರೆ, ನಳಿನಿ ಪುರಂದರ ಕುಲಾಲ್ ಬೆಳ್ಳಾರೆ, ಇಬ್ರಾಹಿಂ ಅಂಬಟೆಗುಡ್ಡೆ ಪೆರುವಾಜೆ, ಅಬೂಬಕ್ಕರ್ ಅರಾಫ ಬಾಳಿಲ ಇವರನ್ನು ಸರಕಾರ ನೇಮಕ ಮಾಡಿ...
Ad Widget

58ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ – ಎ.19 ರಂದು ಬೆಳಿಗ್ಗೆ 11ಗಂಟೆಗೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 9ನೇ ವಾರದಲ್ಲಿ ಮುನ್ನಡೆಯುತ್ತಿದ್ದು, 58 ನೇ ದಿನಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.19, ಶನಿವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಸುಳ್ಯ : ಪ್ರಥಮ ದರ್ಜೆ ಕಾಲೇಜಿನಲ್ಲಿ ಅಪೆರ್ಚರ್ 2k25 ಸೈನ್ಸ್ ಫೆಸ್ಟ್ – ವಿಜ್ಞಾನಕ್ಕೆ ತೆರೆದುಕೊಳ್ಳಿ ಕಾರ್ಯಕ್ರಮ

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ಸಂಘ ಹಾಗೂ ಐಕ್ಯೂಏಸಿ ಸಹಯೋಗದಲ್ಲಿ ಅಪೆರ್ಚರ್ 2k25 - ವಿಜ್ಞಾನಕ್ಕೆ ತೆರೆದುಕೊಳ್ಳಿ ಎಂಬ ಸೈನ್ಸ್ ಫೆಸ್ಟ್ ಕಾರ್ಯಕ್ರಮ ಎ.16 ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಸನ ಇಲ್ಲಿ ಭೌತ ವಿಜ್ಞಾನ...

ಗುಡ್ ಫ್ರೈಡೆ ಹಿನ್ನೆಲೆ 33/11 ಕೆವಿ ಲೈನ್ ನಿರ್ವಹಣಾ ಕೆಲಸ ಮುಂದೂಡಿಕೆ – ಇಂದು ಪವರ್ ಕಟ್ ಇಲ್ಲ

ಮಡಾವು ಸುಳ್ಯ 33 ಕೆ.ವಿ. ವಿದ್ಯುತ್ ಲೈನ್ ನಿರ್ವಹಣಾ ಕೆಲಸ ಇರುವುದರಿಂದ ಎ.18 ರಂದು ವಿದ್ಯುತ್ ಕಡಿತ ಮಾಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ಪ್ರಕಟಣೆ ನೀಡಿದ್ದರು. ಆದರೇ ಇಂದು (ಎ.18) ಗುಡ್ ಫ್ರೈಡೆ ಇರುವ ಬಗ್ಗೆ ಎಚ್ಚೆತ್ತ ಅಧಿಕಾರಿಗಳು ಪವರ್ ಕಟ್ ಮುಂದೂಡಿದ್ದಾರೆ. ಪ್ರತಿ ಸಲ ಮಂಗಳವಾರ ಮಾತ್ರ ಪವರ್ ಕಟ್ ಮಾಡಬೇಕು, ದಿನ ಬದಲಾವಣೆ...

ಗುಡ್ಡಪ್ಪ ಗೌಡ ಕುದ್ಕುಳಿ ನಿಧನ

ಹರಿಹರ ಪಳ್ಳತ್ತಡ್ಕ ಗ್ರಾಮದ ಗುಡ್ಡಪ್ಪ ಗೌಡ ಕುದ್ಕುಳಿ ರವರು ಏ.17 ರಂದು ರಾತ್ರಿ ನಿಧನರಾದರು.ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಉದ್ಯೋಗಿಯಾಗಿರುವ ಇವರು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದರು.ಮೃತರು ಸಹೋದರ ರಾಮಕೃಷ್ಣ ಗೌಡ, ಪತ್ನಿ ತಾರಾ, ಪುತ್ರಿ ಶ್ರೀಮತಿ ರೇಷ್ಮಾ, ಪುತ್ರ ಪುನೀತ್ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂಪಾಯಿ, ಕಳೆದ ವರ್ಷಕ್ಕಿಂತ ಈ ವರ್ಷ 9 ಕೋಟಿ ರೂಪಾಯಿ ಏರಿಕೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ(155,95,19,567) ರೂಪಾಯಿಗಳಿಗೆ ಏರಿಕೆಯಾಗಿದ್ದು, ದೇವಸ್ಥಾನದ ಆದಾಯ ಈ ವರ್ಷ ಕಳೆದ ವರ್ಷಕ್ಕಿಂತ 9.94 ಕೋಟಿ ರೂಪಾಯಿ ಏರಿಕೆಯಾಗಿದೆ. ದೇವಸ್ಥಾನದ ಕಳೆದ ವರ್ಷದ ಆದಾಯ 146.01 ಕೋಟಿ ರೂಪಾಯಿ ಆಗಿತ್ತು.ಸರ್ಪ ಸಂಸ್ಕಾರ ಸೇರಿದಂತೆ ವಿವಿಧ...
error: Content is protected !!