
ಪೈಕ – ಹನ್ನೆರಡು ಒಕ್ಕಲಿನ ಊರುಕಟ್ಟಿಗೆ ಸಂಬಂಧಿಸಿದಂತೆ ಊರಿನ ನಾಲ್ವರು ಸಾಧಕ 4 ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ಎ.16 ರಂದು ಪೈಕ ಊರು ಗೌಡರ ಮನೆಯಲ್ಲಿ ನಡೆಯಿತು
2024 – 25 ನೇ ಸಾಲಿನ NMMS ಪರೀಕ್ಷೆಯಲ್ಲಿ ಸುಳ್ಯ ತಾಲೂಕಿಗೆ ತೃತೀಯ ಸ್ಥಾನಿಯಾದ ಕು. ಲಾವಣ್ಯ ಡಿ ಎನ್ ಹಾಗೂ PUC ವಿಭಾಗದಲ್ಲಿ ಗುತ್ತಿಗಾರು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನಿಯಾದ ಕು.ಹಿತಾಶ್ರೀ ಎನ್.ಡಿ ಮತ್ತು ವಿಜ್ಞಾನ ವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಸಾಧನೆಗೈದ ಕು. ಶ್ರೀ ಪ್ರೀಯಾ ಬಿ.ಪಿ, ಉದಯೋನ್ಮೂಖ ಬಾಲ ಪ್ರತಿಭೆ ಕ್ರೀಡಾರಂಗದಲ್ಲಿ ಉದ್ಘೋಷಕನಾಗಿ ಮಿಂಚಿದ ಜಸ್ಟಿತ್ ಕನ್ನಡ್ಕ ಅವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಪೈಕ ಬೈಲಿಗೆ ಸಂಬಂಧಪಟ್ಟ ಊರಿನ ಎಲ್ಲಾ ಗಣ್ಯರು ಉಪಸ್ಥಿತರಿದ್ದು ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಪಿ ಆರ್ ಕಿಶೋರ್ ಕುಮಾರ್ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ನಿವೃತ್ತ P.D.೦ ಮಣೆಯಾನ ಪುರುಷೋತ್ತಮ, ಹಿರಿಯರಾದ ಮುಚ್ಚಾರ, ಚಿನ್ನಪ್ಪ ಗೌಡ, ಊರ ಗೌಡರಾದ ಜಗದೀಶ ಪಿ ಎಸ್ ಪೈಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸ್ನೇಹಲತಾ ಪುರುಷೋತ್ತಮ, ಪಂಚಾಯತು ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಯಮಿತಾ ಪೂರ್ಣಚಂದ್ರ ರವರು, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ ವಿನುತಾ ಜಾಕೆಯವರು ವಿಶೇಷ ಸಾಧನೆಗೈದ ಮಕ್ಕಳಿಗೆ ಶುಭಹಾರೈಸಿದರು
ಲೋಕೇಶ್ವರ ಡಿ.ಆರ್ ರವರು ಮಕ್ಕಳು ವಿದ್ಯಾಭ್ಯಾಸದೊಂದಿಗೆ ಸಂಸ್ಕಾರಯುತವಾಗಿ ಊರಿಗೆ ಶಾಲೆಗೆ ಮನೆತನಕ್ಕೆ ಕೀರ್ತಿ ತರಬೇಕು ಎಂದು ಶುಭಹಾರೈಸಿ ಧನ್ಯವಾದವಿತ್ತರು.
