
ನವೀಕರಣಗೊಂಡ ಮಡಪ್ಪಾಡಿ ಶಾಲಾ ಕ್ರೀಡಾಂಗಣನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಲೋಕಾರ್ಪಣೆಗೊಳಿಸಿದರು.ಅನುದಾನವನ್ನು ಒದಗಿಸಿ ಗ್ರಾಮದ ಪ್ರಮುಖ ಕ್ರೀಡಾಂಗಣಕ್ಕೆ ಪುನಃಶ್ಚೇತನ ನೀಡಿದ ಶಾಸಕರಿಗೆ ಯುವಕ ಮಂಡಲ ಮಡಪ್ಪಾಡಿ ಮತ್ತು ಊರವರ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು, ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ ಹಾಗೂ ಕಾರ್ಯದರ್ಶಿಯಾದ ರಕ್ಷಿತ್ ಶೀರಡ್ಕ, ಮಡಪ್ಪಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಉಷಾ ಜಯರಾಮ್, ಸದಸ್ಯರಾದ ಜಯರಾಮ ಹಾಡಿಕಲ್ಲು, ಮುಖ್ಯೋಪಾದ್ಯಾಯರಾದ ಕುಶಾಲಪ್ಪ ಪಾರೆಪ್ಪಾಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸದಾನಂದ ಬಲ್ಕಜೆ, ಮಾಜಿ ಅಧ್ಯಕ್ಷರಾದ ಚಂದ್ರಮತಿ ಪೂಂಬಾಡಿ ಮತ್ತು ಶಂಕುತಳ ಕೇವಳ, ಮಾಜಿ ಉಪಾಧ್ಯಕ್ಷರಾದ ಎನ್. ಟಿ. ಹೊನ್ನಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕರುಣಾಕರ ಪಾರೆಪ್ಪಾಡಿ ಮತ್ತು ಪ್ರದೀಪ ಪಣಿಯಾಲ, ಶಕ್ತಿಕೇಂದ್ರ ಪ್ರಮುಖರಾದ ಚಂದ್ರಶೇಖರ ಗೋಳ್ಯಾಡಿ, ಬೂತ್ ಸಮಿತಿಯ ಅಧ್ಯಕ್ಷರಾದ ಧನ್ಯಕುಮಾರ್ ದೇರುಮಜಲು ಮತ್ತು ರಂಜಿತ್ ಬೊಮ್ಮೆಟ್ಟಿ, ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾದ ಹೇಮಕುಮಾರ್ ಹಾಡಿಕಲ್ಲು, ಗುತ್ತಿಗೆದಾರರಾದ ಶ್ರೇಯಸ್ ಮುತ್ಲಾಜೆ , ಯುವಕ ಮಂಡಲದ ಸದಸ್ಯರು ಹಾಗೂ ಊರಿನ ಬಾಂಧವರು ಉಪಸ್ಥಿತರಿದ್ದರು.
