
ಗುತ್ತಿಗಾರಿನ ಕಡ್ತಲ್ ಕಜೆ ಸಮೀಪ ಓವರ್ ಟೇಕ್ ಮಾಡಿ ಬರುತ್ತಿರುವ ಬಸ್ ಗೆ ಸೈಡ್ ಕೊಡುವ ಭರದಲ್ಲಿ ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಢಿಕ್ಕಿಯಾಗಿ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ.
ಐನೆಕಿದು ಕಡೆಯ ಬೊಲೆರೋ ಸುಳ್ಯ ಕಡೆಯಿಂದ ಗುತ್ತಿಗಾರು ಕಡೆಗೆ ಬರುತ್ತಿತ್ತು. ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
