Ad Widget

ರೋಟರಿ ಸಮಾಜ ಸೇವೆ ನಿರಂತರ ಮುಂದುವರೆಯಲಿ – ಜಿಲ್ಲಾ ರಾಜ್ಯಪಾಲ ರೋ. ವಿಕ್ರಂ ದತ್ತ ;  ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ


ಸುಬ್ರಹ್ಮಣ್ಯ ಏ.14: ದಕ್ಷಿಣ ಕನ್ನಡ ಕೊಡಗು ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 31 81ರ ಜಿಲ್ಲಾ ರಾಜ್ಯಪಾಲ ವಿಕ್ರಮ ದತ್ತ ಅವರು ಗುರುವಾರ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ ನೀಡಿದರು. ಅವರು ಅಂದು ಸಂಜೆ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ “ರೋಟರಿ ಅಂತರಾಷ್ಟ್ರೀಯ ಸಂಸ್ಥೆ. ವಿಶ್ವದಾದ್ಯಂತ ಇರುವ ಈ ಸಂಸ್ಥೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎನ್ನುವ ಉದ್ದೇಶದೊಂದಿಗೆ ಸಮಾಜದಲ್ಲಿರತಕ್ಕಂತ ಬಡಬಗ್ಗರಿಗೆ ಆಹಾರ, ಶುದ್ಧ ಕುಡಿಯುವ ನೀರು, ಆರೋಗ್ಯ ತಪಾಸನೆ, ಸೂರು ಇಲ್ಲದವರಿಗೆ ವಾಸಿಸಲು ಮನೆ, ಅಂಗನವಾಡಿ ಕೇಂದ್ರಗಳ ಪುನಶ್ಚೇತನ, ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ದೊಂದಿಗೆ ಸಹಾಯಧನ, ಮಹಿಳೆಯರಿಗಾಗಿ ಕೌಶಲ್ಯ ತರಬೇತಿ ಶಿಬಿರಗಳು, ರಕ್ತದಾನ ಶಿಬಿರ, ಇತ್ಯಾದಿ ಸಮಾಜ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ .ಇದು ಎಲ್ಲಾ ಕ್ಲಬ್ಬುಗಳಲ್ಲಿಯೂ ನಿರಂತರವಾಗಿ ನಡೆದು ಸಮಾಜಕ್ಕೆ ಪ್ರಯೋಜನವಾಗಲಿ “ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಮಾಡಿದ ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ.ತ್ರಿಮೂರ್ತಿ, ಕುಕ್ಕೆ ಕ್ಷೇತ್ರದಲ್ಲಿ ಪಹರೇ ವೃತ್ತಿಯಲ್ಲಿ ನಿರಂತರ 39 ವರ್ಷಗಳಿಗೂ ಅಧಿಕ ಸಮಯ ಸೇವೆಯನ್ನು ಸಲ್ಲಿಸಿದ ವಿಠಲ ಮೂಲ್ಯ, ಏನೆಕಲ್ಲು ಅಂಗನವಾಡಿಯಲ್ಲಿ 40 ವರ್ಷಗಳ ಸೇವೆಯೊಂದಿಗೆ ಅಂಗನವಾಡಿಯ ಅಭಿವೃದ್ಧಿಗೆ ಶ್ರಮಿಸಿದ ಜಯಲಕ್ಷ್ಮಿ ಅವರುಗಳನ್ನು ಈ ಸಂದರ್ಭಗಳಲ್ಲಿ ಜಿಲ್ಲಾ ರಾಜ್ಯಪಾಲರು ಗೌರವಿಸಿದರು. ಹಾಗೆಯೇ ಪಂಜ ಪಲ್ಲೋಡಿಯಲ್ಲಿ ವಿಕಲಚೇತನ ಮಹಿಳೆ ಮೀನಾಕ್ಷಿ ಅವರಿಗೆ ಮನೆ ಸಾಮಗ್ರಿಗಳು ಹಾಗೂ ಸಹಾಯಧನ ಹಸ್ತಾಂತರ, ಏನೇಕಲ್ಲು ಪುಂಡಿಗದ್ದೆ ಸಮೀಪ ದಿ.ಈಶ್ವರ ಮಾಸ್ಟರ್ ಅವರ ಸ್ಮರಣಾರ್ಥ ಮರು ನಿರ್ಮಾಣ ಮಾಡಿ ಬಸ್ಸು ತಂಗುದಾಣದ ಹಸ್ತಾಂತರ, ಎನೆಕಲ್ಲು ಅಂಗನವಾಡಿ ಕೇಂದ್ರದ ಅಭಿವೃದ್ಧಿಗಾಗಿ ನಿರ್ಮಿಸಲಾದ ವಿವಿಧ ಕ್ರೀಡಾ ಪರಿಕರಗಳ ಲೋಕಾರ್ಪಣೆ, ಏನೆಕಲ್ಲು ರೈತ ಯುವಕಮಂಡಲ ಕಟ್ಟಡದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಸುಬ್ರಹ್ಮಣ್ಯ ವಾಲ್ಗದ ಕೇರಿಯಲ್ಲಿ ದಿ.ಪುಟ್ಟಣ್ಣ ಅವರ ಧರ್ಮಪತ್ನಿ ಅವರಿಗೆ ನಿರ್ಮಿಸಿ ಕೊಡಲಾದ ನೂತನ ಶೌಚಾಲಯದ ಉದ್ಘಾಟನೆ, ಕೊಂಬಾರು ಗ್ರಾಮದ ಕೆಂಜಲ ಎಂಬಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ನಿರ್ಮಿಸಲಾದ ನೂತನ ಬಸ್ ನಿಲ್ದಾಣದ ಲೋಕಾರ್ಪಣೆ, ಸುಬ್ರಹ್ಮಣ್ಯ ಸಮೀಪದ ದೇವರಹಳ್ಳಿ ಯಲ್ಲಿ ಟೈಲರಿಂಗ್ ತರಬೇತಿ ಕೇಂದ್ರದ ಅಭಿವೃದ್ಧಿ ಹಾಗೂ ಶಿಕ್ಷಕಿಗೆ ಮಾಸಿಕ ವೇತನ ಹಸ್ತಾಂತರ ಇತ್ಯಾದಿ ಕಾರ್ಯಕ್ರಮಗಳನ್ನು ಜಿಲ್ಲಾ ರಾಜ್ಯಪಾಲರ ಸಮ್ಮುಖದಲ್ಲಿ ನಡೆದಿರುತ್ತದೆ. ವೇದಿಕೆಯಲ್ಲಿ ಜಿಲ್ಲಾ ರೋಟರಿ ಪ್ರಥಮ ಮಹಿಳೆ ಲತಾ ವಿಕ್ರಮದತ್ತ ,ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವ ,ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್ ,ಕಾರ್ಯದರ್ಶಿ ಚಿದಾನಂದ ಕುಳ ,ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ಲಬ್ಬಿಗೆ ನೂತನವಾಗಿ ಶಿವಪ್ರಸಾದ್ ಮಾದನಮನೆ, ಹಾಗೂ ವಿಶ್ರುತ್ ಕುಮಾರ್ ಅವರುಗಳನ್ನ ಸೇರ್ಪಡೆಗೊಳಿಸಲಾಯಿತು. ಸಂಜೆ ರಾಜಪಾಲರು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪ್ರಗತಿ ಪರಿಶೀಲನೆಗಳನ್ನ ಕ್ಲಬ್ ಅಸೆಂಬ್ಲಿ ನಡೆಸಿದರು .ಪೂರ್ವ ಅಧ್ಯಕ್ಷರುಗಳಾದ ಗೋಪಾಲ್ ಎಣ್ಣೆ ಮಜಲ್ ,ವಿಜಯಕುಮಾರ ಆಮೈ, ರಾಮಕೃಷ್ಣ ಮಲ್ಲಾರ ಭರತ್ ನೆಕ್ರಾಜ, ಕಾರ್ಯಪ್ಪ ಪಿ ಎಸ್ ,ಶಿವರಾಮ ಏನಕ್ಕಲ್, ಮಾಯಿಲಪ್ಪ ಸಂಕೇಶ ,ಸೀತಾರಾಮ ಎಣ್ಣೆ ಮಜಲ್, ಲೋಕೇಶ್ ಬಿಎನ್, ಕಿಶೋರ ಕುಮಾರ್ ಕೂಜುಗೋಡು, ಉಮೇಶ ಕೆಎನ್, ಗಿರಿಧರ ಸ್ಕಂದ, ವೆಂಕಟೇಶ ಎಚ್ ಎಲ್, ವಸಂತಕುಮಾರ ಕೆದಿಲ ಹಾಗೂ ಸದಸ್ಯರಾದ ಸುದರ್ಶನ ಶೆಟ್ಟಿ, ನಾಗರಾಜ ಪರಮಲೆ ,ರೋಹಿತ್ ಬಿಬಿ, ನವೀನ್ ವಾಲ್ತಾಜೆ, ಲೋಕೇಶ್ ಎಣ್ಣೆ ಮಜಲ್, ಪುನೀತ್ ಕರ್ನಾಜೆ, ಚಂದ್ರಶೇಖರ ಅಮೈ ,ದಯಾನಂದ ಪೈಕ ಮುಂತಾದವರು ಹಾಜರಿದ್ದು ಸಹಕರಿಸಿದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!