
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ಮಾದ್ರಡ್ಕ ಮತ್ತು ಹೆರಕಜೆ ಎಂಬಲ್ಲಿ 2022-23 ನೇ ಸಾಲಿನ ವಿಶೇಷ ಅನುದಾನದಡಿಯಲ್ಲಿ ರೂ.50 ಲಕ್ಷ ಅನುದಾನದಲ್ಲಿ 930 ಮೀ ರಸ್ತೆ ಕಾಂಕ್ರೀಟಿಕರಣಗೊಂಡಿದ್ದು, ಇದನ್ನು ಶಾಸಕಿಯರಾದ ಕು ಭಾಗೀರಥಿ ರವರು ಏ.10 ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ. ವಿ. ತೀರ್ಥರಾಮ್, ಮಾಜಿ ಜಿ.ಪಂ. ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಸಹಕಾರ ಸಂಘದ ಉಪಾಧ್ಯಕ್ಷರಾದ ಕೃಷ್ಣಯ್ಯ ಮೂಲೆತೋಟ, ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷರಾದ ವಿನಯಕುಮಾರ್ ಮುಳುಗಾಡು, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿವಾಕರ ಮುಂಡೋಡಿ, ದೇವಚಳ್ಳ ಪಂಚಾಯತ್ ಸದಸ್ಯರಾದ ಭವಾನಿಶಂಕರ ಮುಂಡೋಡಿ, ಗುತ್ತಿಗಾರು ಸಹಕಾರಿ ಸಂಘದ ನಿರ್ದೇಶಕರಾದ ಪದ್ಮನಾಭ ಮೀನಾ ಜೆ, ಪುರುಷೋತ್ತಮ ಮಾಡಬಾಕಿಲು ರಾಜೀವ ವಾಲ್ತಾಜೆ, ಶಿವಕುಮಾರ ಬಲ್ಕಜೆ, ಕುಸುಮಾಧರ ಕೊಂಬೆಟ್ಟು, ಕೃಷ್ಣಕುಮಾರ ಪಿಲಿಂಜ, ಜಯಪ್ರಕಾಶ್ ಕಡ್ಲಾರು, ಪ್ರೀತಂ ಮುಂಡೋಡಿ, ಸತ್ಯ ಪ್ರಸಾದ ಬೊಳ್ಳೂರು, ರುತೇಶ್ ಬಲ್ಕಜೆ, ಯಜ್ಞೇಶ್ ಬಲ್ಕಜೆ, ಓಂಪ್ರಸಾದ ಗುಡ್ಡನಮನೆ, ರಕ್ಷಿತ್ ಮಡಪ್ಪಾಡಿ, ವಿನೋದ್ ಕಡೋಡಿ, ತೋರಪ್ಪ ಗೌಡ ಕೊರ್ತ್ಯಡ್ಕ, ಶಿಶೀರ್ ಮಡಪ್ಪಾಡಿ, ಗೀತಾ ಮಾಡಬಾಕಿಲು ಹಾಗೂ ಕವಿತಾ ಮಾಡಬಾಕಿಲು ಉಪಸ್ಥಿತರಿದ್ದರು.
