
ಸುಳ್ಯ ಪ್ರೆಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಈಶ್ವರ ವಾರಣಾಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎ.10ರಂದು ಸುಳ್ಯ ಪ್ರೆಸ್ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.
ಉಪಾಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಹಸೈನಾರ್ ಜಯನಗರ, ನಿರ್ದೇಶಕರುಗಳಾಗಿ ಹರೀಶ್ ಬಂಟ್ಚಾಳ್, ಲೋಕೇಶ್ ಪೆರ್ಲಂಪಾಡಿ, ಜಯಶ್ರೀ ಕೊಯಿಂಗೋಡಿ, ಗಂಗಾಧರ ಕಲ್ಲಪಳ್ಳಿ, ಹೇಮಂತ್ ಸಂಪಾಜೆ, ಸತೀಶ್ ಹೊದ್ದೆಟ್ಟಿ, ಯಶ್ವಿತ್ ಕಾಳಮ್ಮನೆ, ರಮೇಶ್ ನೀರಬಿದಿರೆ ಆಯ್ಕೆಯಾದರು.
ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರಮೇಶ್ ನೀರಬಿದಿರೆ ಲೆಕ್ಕಪತ್ರ ಮಂಡಿಸಿದರು.
