ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ” ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 50 ನೇ ದಿನಕ್ಕೆ ಕಾಲಿರಿಸಿದೆ. ಈ ಹಿನ್ನೆಲೆಯಲ್ಲಿ ಏ.10 ರಂದು ಸಂಭ್ರಮಾಚರಣೆ ನಡೆಯಲಿದೆ. ಕನ್ನಡ, ತುಳು ಚಿತ್ರನಟರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಏ.11ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.
“ಭಾವ ತೀರ ಯಾನ”, ಸಿನಿಮಾದಲ್ಲಿ ಪ್ರಸ್ತುತ ಘಟನೆಗಳ ಬಗ್ಗೆ ಈಗಿನ ಜನತೆ ಕಲಿತುಕೊಳ್ಳಬೇಕಾದ ಅಂಶಗಳ ಉಲ್ಲೇಖಿಸಿ ಚಿತ್ರ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಯುವ ಉತ್ಸಾಹಿ ತಂಡವೇ ಈ ಮಟ್ಟಿನ ಸಾಧನೆ ಮಾಡಿದೆ. ಪುತ್ತೂರಿನಲ್ಲಿ ಕನ್ನಡ ಚಲನಚಿತ್ರ 50 ದಿನ ಪ್ರದರ್ಶನ ಕಂಡ ಚಿತ್ರ ಬೆರಳಣಿಕೆಯಷ್ಟು ಮಾತ್ರ. ಇಂತಹ ಸಂದರ್ಭದಲ್ಲೂ ಭಾವ ತೀರ ಯಾನ ತಂಡ ಉತ್ತಮ ಸಾಧನೆ ಮಾಡಿದೆ. ಈ ಚಿತ್ರದಲ್ಲಿ ತೇಜಸ್ ಕಿರಣ್ ನಾಯಕ ನಟನಾಗಿ ಹಾಗೂ ಅರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿ ನಟಿಯರಾಗಿ ಹೊರಹೊಮ್ಮಿದ್ದಾರೆ. ಅಂತೆಯೇ ಹಿರಿಯರಾದ ರಮೇಶ್ ಭಟ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದು, ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ, ಕ್ಷಮಾ ಅಂಬೆಕಲ್ಲು ಸೇರಿದಂತೆ ಹಲವಾರು ನಟಿಯರು, ತಾರಾ ಬಳಗದಲ್ಲಿದ್ದಾರೆ. ಆರೋಹ ಫಿಲಂಸ್ ಬ್ಯಾನರ್‌ನಡಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿ. ಕೆ. ನಿರ್ಮಾಣ ಮಾಡಿದ್ದು, ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ, ಶಿವಶಂಕರ್ ನೂರಂಬಡ ಛಾಯಾಚಿತ್ರೀಕರಣ ಹಾಗೂ ಸುಪ್ರೀತ್ ಬಿ. ಕೆ. ಸಂಕಲನ ಮಾಡಿದ್ದಾರೆ. ಸುಳ್ಯ ತಾಲೂಕಿನ ವಿವಿಧೆಡೆ ಕೂಡ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಜಯಪ್ರಕಾಶ್ ಕುಕ್ಕೇಟಿ, ವೈದ್ಯರ ಪಾತ್ರದಲ್ಲಿ ಡಾ. ಅನುಷಾ ಮಡಪ್ಪಾಡಿ ನಟಿಸಿದ್ದಾರೆ.
