ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಏ.10 ಗುರುವಾರ ಜಿಲ್ಲಾ ರಾಜ್ಯಪಾಲರಾದ ರೋ .ವಿಕ್ರಮ ದತ್ತ ಅವರು ಅಧಿಕೃತ ಭೇಟಿ ನೀಡಲಿದ್ದು ವಿವಿಧ ಸೇವಾ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.
ಗುರುವಾರ ಬೆಳಿಗ್ಗೆ 9:00ಗೆ ಪಂಜದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿ ಸದಸ್ಯರು ರಾಜಪಾಲರನ್ನು ಬರಮಾಡಿಕೊಳ್ಳ ಇರುವರು. ಅಲ್ಲಿಂದ ಪಲ್ಲೋಡಿ ಎಂಬಲ್ಲಿ ವಿಕಲಚೇತನ ಮಹಿಳೆ ಮೀನಾಕ್ಷಿ ಅವರ ನೂತನವಾಗಿ ನಿರ್ಮಾಣಗೊಂಡ ಮನೆಗೆ ಕೊಡುಗೆಗಳನ್ನು ಹಸ್ತಾಂತರಿಸಲಿದ್ದಾರೆ. ತದನಂತರ ಅಲ್ಲಿಂದ ಏನೇಕಲ್ಲು, ಪುಂಡಿಗದ್ದೆ ಬಳಿ ಮರು ನಿರ್ಮಿಸಲಾದ ದಿ. ನೆಕ್ರಜೆ ಈಶ್ವರಗೌಡ ಸ್ಮಾರಕ ಪ್ರಯಾಣಿಕರ ತಂಬುದಾಣವನ್ನು ಉದ್ಘಾಟಿಸಲಿದ್ದಾರೆ. ಮುಂದೆ ಏನಕಲ್ಲು ಅಂಗನವಾಡಿ ಕೇಂದ್ರಕ್ಕೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಿರುವರು. ಮಧ್ಯಾಹ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನ ಗಂಟೆ 2:30ಕ್ಕೆ ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ಬಸ್ಸು ತಗ್ಗುದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸಂಜೆ ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಂದ ಗೌರವಿಸಲಾಗುವುದು ಹಾಗೂ ವಿವಿಧ ಕೊಡುಗೆಗಳನ್ನು ನೀಡಲಾಗುವುದು ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ತಿಳಿಸಿದ್ದಾರೆ
- Sunday
- April 13th, 2025