
ವಿದ್ಯಾನಿಕೇತನ ಶಿಶು ಮಂದಿರ ಕಳಂಜ ಇಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮ ಎ.09ರಂದು ನಡೆಯಿತು. ಮಕ್ಕಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹೇಮಚಂದ್ರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವಿಭಾಗ ಸಹ ಕಾರ್ಯವಾಹಕ ಸುಭಾಶ್ಚಂದ್ರ ಕಳಂಜ, ಸಂಚಾಲಕಿ ಶ್ರೀಮತಿ ಮಾಲಿನಿ ಪ್ರಸಾದ್, ಮಾತಾಜಿ ಶ್ರೀಮತಿ ಅಕ್ಷತಾ ಉಪಸ್ಥಿತರಿದ್ದರು. ವಿದ್ಯಾನಿಕೇತನ ಶಿಶುಮಂದಿರದ ಅಧ್ಯಕ್ಷ ರವಿಪ್ರಸಾದ್ ರೈ ಕಳಂಜ ಸ್ವಾಗತಿಸಿ, ಕಾರ್ಯದರ್ಶಿ ಅಜಯ್ ಆದಳ ವಂದಿಸಿದರು.