
ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ 76 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಕಲಾವಿಭಾಗದಲ್ಲಿ ಹರ್ಷಿತಾ ಕುದ್ಕುಳಿ ಮನೆ (ಜಯಂತಿ ಹಾಗೂ ಬಾಲಕೃಷ್ಣ ಕುದ್ಕುಳಿ ದಂಪತಿಗಳ ಪುತ್ರಿ) ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಕಲಾವಿಭಾಗದಲ್ಲಿ 23 ವಿದ್ಯಾರ್ಥಿಗಳಿದ್ದು ಎಲ್ಲರು ಪಾಸಾಗಿದ್ದು ಹರ್ಷಿತಾ ಕುದ್ಕುಳಿ ಮನೆ 587, ಭಾಗ್ಯಶ್ರೀ ಕೆ.ಡಿ. 567, ರೆತಿಕಾ ಸಿ 564 ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗಿದ್ದಾರೆ. ಸುಷ್ಮಿತ ಜಿ 565 , ಸುವರ್ಣ ಜಿ.ಎಸ್. 546, ಮೇಘನಾ ಕೆ. 532 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 31 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎಲ್ಲರೂ ತೇರ್ಗಡೆಯಾಗಿದ್ದಾರೆ. ವಿದ್ಯಾಕುಮಾರಿ ಬಿ.ಎಲ್. ಬೊಳ್ಳೂರು 531, ವಿನುತಾ ವಿ. 521 ಅಂಕ ಪಡೆದಿದ್ದಾರೆ.
