
ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.76.19 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ.
ಐವರ್ನಾಡಿನ ಕಟ್ಟತ್ತಾರು ವಿಶ್ವನಾಥ ಕೆ ಮತ್ತು ನಳಿನಿ ದಂಪತಿ ಪುತ್ರ ಹವೀನ ಕೆ.ವಿ.539 ಅಂಕ,ಐವರ್ನಾಡು ಬಾಂಜಿಕೋಡಿ ರೊಜಾರಿಯೋ ಮಚಾದೋ ಮತ್ತು ಶೋಭಾ ಮೊಂತೆರೊ ದಂಪತಿ ಪುತ್ರ ರೋಶನ್ ಮಚಾದೋ 479 ಅಂಕ,
ಕುಕ್ಕುಜಡ್ಕ ಭಾಸ್ಕರ ಆಚಾರ್ಯ ಮತ್ತು ಶ್ರೀಮತಿ ಲತಾ ಭಾಸ್ಕರ್ ದಂಪತಿ ಪುತ್ರ ಅಕ್ಷಯ್ ಕೆ.ಬಿ 467 ಅಂಕ ,ಐವರ್ನಾಡು ಸಿ.ಆರ್.ಸಿ ತ್ಯಾಗರಾಜ ಮತ್ತು ಸೀತಾಲಕ್ಷ್ಮೀ ದಂಪತಿ ಪುತ್ರಿ ಕಾವ್ಯ 442 ಅಂಕ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ 11 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 6 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಮುಚ್ಚಿನಡ್ಕ ಹುಕ್ರ ಮತ್ತು ಲಲಿತಾ ದಂಪತಿ ಪುತ್ರಿ ಲಿಖಿತ 491ಅಂಕ,ಬಾಂಜಿಕೋಡಿ ವಾದುದೇವ ಮತ್ತು ರುಕ್ಮಿಣಿ ದಂಪತಿ ಪುತ್ರ ಹರ್ಷೇಂದ್ರ ಕುಮಾರ್ 489 ಅಂಕ,ಐವರ್ನಾಡಿನ ಕೈವಲ್ತಡ್ಕ ಕೊರಗಪ್ಪ ಕೆ.ಮತ್ತು ರಾಜೀವಿ ದಂಪತಿ ಪುತ್ರಿ ರಂಜಿತಾ ಕೆ 449 ಅಂಕ ಗಳಿಸಿದ್ದಾರೆ.
