Ad Widget

ಸುಳ್ಯ : ಶಾರದಾ ಪದವಿಪೂರ್ವ ಕಾಲೇಜಿಗೆ 100 ಶೇ. ಫಲಿತಾಂಶ – ಕಲಾ ವಿಭಾಗದಲ್ಲಿ ಹರ್ಷಿತಾ ಕುದ್ಕುಳಿ ತಾಲೂಕಿಗೆ ಪ್ರಥಮ

ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ 76 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಕಲಾವಿಭಾಗದಲ್ಲಿ ಹರ್ಷಿತಾ ಕುದ್ಕುಳಿ ಮನೆ (ಜಯಂತಿ ಹಾಗೂ ಬಾಲಕೃಷ್ಣ ಕುದ್ಕುಳಿ ದಂಪತಿಗಳ ಪುತ್ರಿ) ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕಲಾವಿಭಾಗದಲ್ಲಿ 23 ವಿದ್ಯಾರ್ಥಿಗಳಿದ್ದು ಎಲ್ಲರು ಪಾಸಾಗಿದ್ದು ಹರ್ಷಿತಾ ಕುದ್ಕುಳಿ ಮನೆ 587, ಭಾಗ್ಯಶ್ರೀ...

ಭಾವ ತೀರ ಯಾನ 7ನೇ ವಾರದಲ್ಲಿ ರನ್ನಿಂಗ್ – ಏ.09ರಂದು ಸಂಜೆ 4.30 ಕ್ಕೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಏ.09ರಂದು ಬುಧವಾರ ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
Ad Widget

ಐವರ್ನಾಡು ಕಾಲೇಜಿಗೆ ಶೇ.76.19 ಫಲಿತಾಂಶ

ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.76.19 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶ ಬಂದಿದೆ.ಐವರ್ನಾಡಿನ ಕಟ್ಟತ್ತಾರು ವಿಶ್ವನಾಥ ಕೆ ಮತ್ತು ನಳಿನಿ ದಂಪತಿ ಪುತ್ರ ಹವೀನ ಕೆ.ವಿ.539 ಅಂಕ,ಐವರ್ನಾಡು ಬಾಂಜಿಕೋಡಿ ರೊಜಾರಿಯೋ ಮಚಾದೋ ಮತ್ತು ಶೋಭಾ ಮೊಂತೆರೊ ದಂಪತಿ...

ಸುಬ್ರಹ್ಮಣ್ಯ ಎಸ್.ಎಸ್.ಎಸ್.ಪಿ.ಯು. ನಲ್ಲಿ ಪರೀಕ್ಷೆಗೆ ಹಾಜರಾದ 415 ವಿದ್ಯಾರ್ಥಿಗಳಲ್ಲಿ 402 ತೇರ್ಗಡೆ- ಕಾಲೇಜಿಗೆ ಶೇ 97 ಫಲಿತಾಂಶ

2024-25 ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಎಸ್.ಎಸ್.ಪಿ.ಯು. ನಲ್ಲಿ ಶೇ.97 ಫಲಿತಾಂಶ ಬಂದಿದೆ. ಒಟ್ಟು ಪರೀಕ್ಷೆಗೆ ಹಾಜರಾದ 415 ವಿದ್ಯಾರ್ಥಿಗಳಲ್ಲಿ 402 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 68 ಡಿಸ್ಟಿಂಕ್ಷನ್, 264 ಪ್ರಥಮ, 59 ದ್ವಿತೀಯ, 11 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ 99 ವಿದ್ಯಾರ್ಥಿಗಳು...

ಬೆಳ್ಳಾರೆ ಜ್ಞಾನದೀಪ ಸಂಸ್ಥೆಗೆ ಉತ್ತಮ ಫಲಿತಾಂಶ – ವಾಣಿಜ್ಯ ವಿಭಾಗದಲ್ಲಿ ಶೇ. 93

ಪ್ರಥಮ ಪಿಯುಸಿ ಅನುತ್ತೀರ್ಣರಾಗಿ ಅಥವಾ ಎಸ್ ಎಸ್ ಎಲ್ ಸಿ ಯಿಂದ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಮಾದರಿಯಲ್ಲೇ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಿಂದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 15 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 93 ಫಲಿತಾಂಶ ದಾಖಲಾಗಿದೆ. ಒಬ್ಬ...

ಪಿಯುಸಿ ಫಲಿತಾಂಶ – ಗುತ್ತಿಗಾರು ಕಾಲೇಜಿಗೆ 98 ಶೇ. ಫಲಿತಾಂಶ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ವಾಣಿಜ್ಯ ವಿಭಾಗ 100% ಹಾಗೂ ಕಲಾ ವಿಭಾಗ 95% ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 50 ವಿದ್ಯಾರ್ಥಿಗಳು ಹಾಜರಾಗಿದ್ದು 49 ವಿದ್ಯಾರ್ಥಿಗಳು ತೇರ್ಗಡೆಯಾಗಿ 98 % ಶೇಕಡಾ ಫಲಿತಾಂಶ ದಾಖಲಾಗಿದೆ. 7...

ದ್ವಿತೀಯ ಪಿಯುಸಿ ಫಲಿತಾಂಶ – ಸುಳ್ಯ ಎನ್.ಎಂ.ಪಿ.ಯು.ಸಿ.ಗೆ 94.16 % ಫಲಿತಾಂಶ – ಅಮೋಘ, ಕೃಷ್ಣ ವಂಶಿ, ಮೇಘಾ, ಮಣಿಕಂಠ ಅವರಿಗೆ ಹೆಚ್ಚು ಅಂಕ

ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಸುಳ್ಯ ಎನ್. ಎಂ.ಪಿ.ಯು. ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 137ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳು 129 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 94.16 ಅತ್ಯುತ್ತಮ ಫಲಿತಾಂಶ ದಾಖಲಾಗಿದೆ.ಒಟ್ಟು33 ಮಂದಿ ಡಿಸ್ಟಿಂಕ್ಷನ್, 79 ಮಂದಿ ಪ್ರಥಮ ದರ್ಜೆ, ಹಾಗೂ 14 ಮಂದಿ ದ್ವಿತೀಯ ದರ್ಜೆಯ ಅಂಕ ಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ 75 ಮಂದಿ ಹಾಜರಾದ ವಿದ್ಯಾರ್ಥಿಗಳಲ್ಲಿ...

ಕಾಸರಗೋಡಿನ ಬೆಳ್ಳೂರಿನಲ್ಲಿ ಗಾಯಕ ಸುಳ್ಯದ ವಿಜಯಕುಮಾರ್ ರಿಗೆ “ಶ್ರೀವಾರಿ ಸಂಗೀತ ರತ್ನ ಪ್ರಶಸ್ತಿ” ಸನ್ಮಾನ

ಕಾಸರಗೋಡು ಜಿಲ್ಲೆ ಆದೂರು ಗ್ರಾಮದ ಬೆಳ್ಳೂರು (ಮುಳ್ಳೇರಿಯ) ಶ್ರೀ ಗೋಪಾಲಕೃಷ್ಣ ಕ್ಷೇತ್ರ ಕೋಳಿಕ್ಕಾಲು ನಲ್ಲಿ ಕಳೆದ ಮಾರ್ಚ್ 2025ರಲ್ಲಿ ನಡೆದ ಅಷ್ಟಬಂದ ಬ್ರಹ್ಮಕಲಶೋತ್ಸವ ವಾರ್ಷಿಕ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀವಾರಿ ಮೆಲೋಡೀಯಸ್ ಆರ್ಕೆಸ್ಟ್ರಾ ಬಾರಡ್ಕ ಇವರ ನೇತೃತ್ವದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸುಳ್ಯದ ಗಾಯಕರಾದ...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ। ಉಡುಪಿ ಪ್ರಥಮ, ದ.ಕ ದ್ವಿತೀಯ। ಹೆಣ್ಮಕ್ಕಳದ್ದೇ ಮೇಲುಗೈ

ದ್ವಿತೀಯ ಪಿಯುಸಿ ಫಲಿತಾಂಶ ಇನ್ನು ಕೆಲವೇ ನಿಮಿಷಗಳಲ್ಲಿ ವೆಬ್‌ಸೈಟ್ ಗಳಲ್ಲಿ ಪ್ರಕಟವಾಗಲಿದೆ. ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಎಂದಿನಂತೆ ಉಡುಪಿ ಜಿಲ್ಲೆ ಪ್ರಥಮಸ್ಥಾನ ಪಡೆದಿದ್ದು, ದ.ಕ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಈ ಬಾರಿಯೂ ಸಹ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ...

ನೀರು ಕುಡಿದು ನಿರೋಗಿಗಳಾಗಿ – ನಮಗೆಷ್ಟು ನೀರು ಬೇಕು?

ನಮ್ಮ ದೇಹದ ಆರೋಗ್ಯಕ್ಕೆ ನೀರು ಅತೀ ಅವಶ್ಯಕ. ವ್ಯಕ್ತಿಯಿಂದ ವ್ಯಕ್ತಿಗೆ ದೇಹದ ತೂಕಕ್ಕೆ ಮತ್ತು ಜೀವನಶೈಲಿಗೆ ಹೊಂದಿಕೊಂಡು ನೀರಿನ ಅವಶ್ಯಕತೆಯ ಮಟ್ಟ ಭಿನ್ನವಾಗಿರುತ್ತದೆ. ವ್ಯಕ್ತಿಯ ದೈಹಿಕ ಪರಿಸ್ಥಿತಿ (ಗರ್ಭಾವಸ್ಥೆ ಹಾಲೂಡಿಸುವ ಸಮಯ ಇತ್ಯಾದಿ) ಮತ್ತು ದೇಹದ ಆರೋಗ್ಯ ಪರಿಸ್ಥಿತಿ (ಜ್ವರ, ವಾಂತಿ, ಭೇದಿ, ಅತಿಸಾರ ಇತ್ಯಾದಿ) ವ್ಯಕ್ತಿಯ ವಯಸ್ಸು, ಲಿಂಗ ಮುಂತಾದ ಎಲ್ಲಾ ಅಂಶಗಳು ವ್ಯಕ್ತಿಯ...
Loading posts...

All posts loaded

No more posts

error: Content is protected !!