
ನಾಲ್ಕೂರು ಗ್ರಾಮದ ನಡುಗಲ್ಲು ಶಾಲಾ ಬಳಿಯ ಕುಶಾಲಪ್ಪ ದೇರಪ್ಪಜ್ಜನ ಮನೆಯಲ್ಲಿ ಅವರ ಪತ್ನಿ ಹಾಗೂ ಮಗ ವಿಷ ಸೇವಿಸಿದ ಘಟನೆ ನಡೆದಿದ್ದು, ಮಗ ಮೃತಪಟ್ಟ ಘಟನೆ ವರದಿಯಾಗಿದೆ.
ಕುಶಾಲಪ್ಪ ರವರ ಪತ್ನಿ ಸುಲೋಚನಾ ಮತ್ತು ಮಗ ನಿತಿನ್ ಕುಮಾರ್ ಇಂದು ಇಲಿ ಪಾಷಣ ಸೇವಿಸಿದ ಘಟನೆ ನಡೆದಿದ್ದು, ಮಗ ನಿತಿನ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರು ತಂದೆ ಕುಶಾಲಪ್ಪ , ಪತ್ನಿ ದೀಕ್ಷಾರನ್ನು ಅಗಲಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ನಿತಿನ್ ಅವರಿಗೆ ಮದುವೆಯಾಗಿತ್ತು.
