



ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಜ.19 ರಂದು ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಕೋರ್ಟ್ ಮುಖಾಂತರ ಮತದಾನದ ಹಕ್ಕನ್ನು ಪಡೆದವರೂ ಮತ ಚಲಾವಣೆ ಮಾಡಿದ್ದು, ನ್ಯಾಯಾಲಯದ ಮುಂದಿನ ಆದೇಶದವರೆಗೆ ಫಲಿತಾಂಶ ಘೋಷಣೆ ಮಾಡಬಾರದೆಂಬ ಆದೇಶ ಇದ್ದುದರಿಂದ ಫಲಿತಾಂಶ ಘೋಷಣೆಯಾಗದೇ ಇದ್ದು, ಬಳಿಕ ಸಂಘಕ್ಕೆ ಆಡಳಿತಾಧಿಕಾರಿಗಳ ನೇಮಕವಾಗಿತ್ತು.
ಚಲಾವಣೆಗೊಂಡ ಮತಗಳಲ್ಲಿ ತೀರಿಕೊಂಡವರ ಹೆಸರುಗಳೂ ಹಾಗೂ ಡಿಫಾಲ್ಟರ್ ಗಳೂ ಇದ್ದುದರಿಂದ ಫಲಿತಾಂಶ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿ ಒಂದು ತಂಡ ನ್ಯಾಯಾಲಯದ ಮೊರೆ ಹೋಗಿದ್ದು, ಫಲಿತಾಂಶ ಘೋಷಿಸಬೇಕೆಂದು ವಿಜೇತರ ತಂಡ ಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಚುನಾವಣಾ ಫಲಿತಾಂಶ ಘೋಷಿಸಲು ಆದೇಶ ನೀಡಿರುವುದಾಗಿ ತಿಳಿದುಬಂದಿದೆ. ಏ.05 ರಂದು ಕೋರ್ಟ್ ಆದೇಶದ ಪ್ರತಿ ಸಹಕಾರಿ ಇಲಾಖೆಯ ಡಿ.ಆರ್ ಅವರ ಕೈ ಸೇರಿರುವುದಾಗಿ ತಿಳಿದುಬಂದಿದ್ದು, ಆದೇಶ ಪ್ರತಿ ಕೈ ಸೇರಿದ ಏಳು ದಿನದೊಳಗೆ ಫಲಿತಾಂಶ ಘೋಷಣೆ ಮಾಡಲು ತೀರ್ಪಿನಲ್ಲಿ ತಿಳಿಸಲಾಗಿದೆ.
