
ಸುಳ್ಯ:ಗೌಡರ ಯುವ ಸೇವಾ ಸಂಘದ ತಾಲೂಕು ಮಹಿಳಾ ಘಟಕದ ವತಿಯಿಂದ ಸುಳ್ಯ ತಾಲೂಕು ಮಟ್ಟದ ಮಕ್ಕಳ ಚೆಸ್ ಸ್ಪರ್ಧೆ ಎ.22ರಂದು ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದುವತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ಪರ್ಧೆಯ ವಿವರ ನೀಡಿದರು.
ಅವರು 1ರಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗಾಗಿ ತಾಲೂಕು ಮಟ್ಟದ ಮುಕ್ತ ಚೆಸ್ ಸ್ಪರ್ಧೆಯನ್ನು ನಡೆಸಲಾಗುವುದು. ಜಾತಿಯ ನಿರ್ಬಂಧವಿಲ್ಲದೆ ನಡೆಯುವ ಈ ಪಂದ್ಯಾಟವು ಕಿರಿಯ ಪ್ರಾಥಮಿಕ (1-5) ಹಿರಿಯ ಪ್ರಾಥಮಿಕ (6-8) ಮತ್ತು ಪ್ರೌಢಶಾಲಾ ವಿಭಾಗ (9-10) ದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿರುವುದು. ಭಾಗವಹಿಸುವ ಸ್ಪರ್ಧಾಳುಗಳು ಚೆಸ್ ಬೋರ್ಡನ್ನು ತಾವೇ ತರತಕ್ಕದ್ದು. ಸ್ಪರ್ಧೆಯ ಶುಲ್ಕವು ರೂ. 100/- ಆಗಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಎ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ವೆಂಕಟ್ರಮಣ ಸೊಸೈಟಿಯ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಎಂಜಿಎಂ ಶಾಲೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲು, ಗೌಡ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ರೇಣುಕಾ ಸದಾನಂದ ಜಾಕೆ, ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು, ತರುಣ ಘಟಕದ ಅಧ್ಯಕ್ಷ ಪ್ರೀತಂ ಕೇರ್ಪಳ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ (8496866368, 9480534929, 9481023779, 9900204956,) ಸಂಪರ್ಕಿಸಬಹುದು ಎಂದು ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ತಾಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ಸಂದೇಶ್, ಕೋಶಾಧಿಕಾರಿ, ಜಯಶ್ರೀ ರಾಮಚಂದ್ರ ಪಲ್ಲತ್ತಡ್ಕ, ಚೆಸ್ ಸ್ಪರ್ಧೆಯ ಸಂಚಾಲಕರಾದ ಭಾರತಿ ಉಳುವಾರು, ಮೀನಾಕ್ಷಿ ರಾಮಕಜೆ, ಪುಷ್ಪಾವತಿ, ಕುಸುಮಾ ಕೊಳಂಜಿಕೋಡಿ, ಜನಾರ್ದನ ಕೊಳೆಂಜಿಕೋಡಿ, ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.
