
ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಧ್ವಜರೋಹಣ ಕಾರ್ಯಕ್ರಮ ಹಮ್ನಿಕೊಳ್ಳಲಾಗಿದ್ದು ಅದರ ಅಂಗವಾಗಿ ದೇವಚಳ್ಳ ಗ್ರಾಮದ ದೇವ ಬೂತ್ ನಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ದೇವ ಬೂತ್ ಅಧ್ಯಕ್ಷರಾದ ಲಕ್ಷ್ಮೀಶ ಅಡ್ಡನಪಾರೆ ಯವರ ಮನೆಯಲ್ಲಿ ಪಕ್ಷದ ಧ್ವಜರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ರಮೇಶ್ ಪಡ್ಪು, ಬೂತ್ ಸಮಿತಿ ಕಾರ್ಯದರ್ಶಿ ಮುಕುಂದ ಹಿರಿಯಡ್ಕ, ಮನ್ ಕಿ ಬಾತ್ ಪ್ರಮುಖ್ ತೀರ್ಥೇಶ್ ಪಾರೆಪ್ಪಾಡಿ, ಬೂತ್ ಸಮಿತಿ ಸದಸ್ಯ ರಾಮಚಂದ್ರ ಅಚ್ರಪ್ಪಾಡಿ, ಕಾರ್ಯಕರ್ತರಾದ ಜನಾರ್ಧನ ಅಡ್ಡನಪಾರೆ, ಗೋಪಾಲ ಅಡ್ಡನಪಾರೆ, ಆಶಿಕ್ ಕೆ.ಪಿ., ಭವಂತ್ ಕಡಪಳ, ಚೈತನ್ ರಾಮ್ ಪಾರೆಪ್ಪಾಡಿ, ಪರಶುರಾಮ ಕಡಪಳ, ಸುಬ್ಬಮ್ಮ ಅಡ್ಡನಪಾರೆ, ಭವ್ಯ ಅಡ್ಡನಪಾರೆ ಉಪಸ್ಥಿತರಿದ್ದರು.
