
ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಕಾಲಾವಧಿ ನಡೆಯುವ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಿತು. ಏ.4ರಂದು ಬೆಳಿಗ್ಗೆ ಕೊಡಮಂತಾಯ ದೈವಕ್ಕೆ ನೇಮ, ಬ್ರಹ್ಮರ ಉತ್ಸವ ನಡೆಯಿತು.ಸಂಜೆ ಬೈದರ್ಕಳ ಭಂಡಾರ ತೆಗೆದು ಶ್ರೀ ರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು, ಮಾನಿ ಬಾಲೆ ಗರಡಿ ಇಳಿಯುವುದು ಮರುದಿನ ಬೆಳಿಗ್ಗೆ ಕೋಟಿ-ಚೆನ್ನಯರ ದರ್ಶನ (ಸೇಟು), ಗಂಧ ಪ್ರಸಾದ ವಿತರಣೆ ನಡೆಯಿತು.
